Asianet Suvarna News Asianet Suvarna News

ದೇಶದ ಮೊದಲ ಬುಲೆಟ್ ಟ್ರೈನ್ ಶಂಕುಸ್ಥಾಪನೆ ಡೇಟ್ ಫಿಕ್ಸ್

750 ಮಂದಿ ಪ್ರಯಾಣಿಸಬಹುದಾದ ಬುಲೆಟ್ ರೈಲು, 2023ರ ಡಿಸೆಂಬರ್'ಗೆ ಲೋಕಾರ್ಪಣೆಯಾಗುವ  ನಿರೀಕ್ಷೆಯಿದೆ.

PM Narendra Modi And Shinzo Abe To Lay Foundation Stone For Bullet Train Project On Thursday

ನವದೆಹಲಿ(ಸೆ.10): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಬುಲೆಟ್ ಟ್ರೈನ್ ಯೋಜನೆ ಕೊನೆಗೂ ಕೈಗೂಡುವ ಹಂತದಲ್ಲಿದೆ.

ಅಹಮದಾಬಾದ್-ಮುಂಬೈ ನಡುವೆ ಅತಿ ವೇಗದ ರೈಲು ಯೋಜನೆಗೆ ಮುಂದಿನ ಸೆಪ್ಟೆಂಬರ್ 14ರಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯಿಂದ ಎರಡು ನಗರಗಳ ನಡುವಿನ ಪ್ರಯಾಣ ಸಮಯ ಮೂರರಿಂದ ಏಳು ಗಂಟೆಗಳವರೆಗೆ ಉಳಿತಾಯವಾಗಲಿದೆ ಎನ್ನಲಾಗಿದೆ. 750 ಮಂದಿ ಪ್ರಯಾಣಿಸಬಹುದಾದ ಬುಲೆಟ್ ರೈಲು, 2023ರ ಡಿಸೆಂಬರ್'ಗೆ ಲೋಕಾರ್ಪಣೆಯಾಗುವ  ನಿರೀಕ್ಷೆಯಿದೆ.

1.10 ಲಕ್ಷ ಕೋಟಿ ರುಪಾಯಿ ವೆಚ್ಚದ ಈ ಯೋಜನೆಗೆ ಜಪಾನ್ ಅನುದಾನವೂ  ದೊರೆಯುತ್ತಿದೆ.

Follow Us:
Download App:
  • android
  • ios