ಗುಜರಾತ್ ಮತದಾರರ ಗಮನ ಸೆಳೆಯಲು ಮೋದಿ ಹಾರಾಟ ನಡೆಸಿದ ಸೀ ಪ್ಲೇನ್, ಪಾಕಿಸ್ತಾನದ ಕರಾಚಿಯಿಂದ ಗುಜರಾತಿಗೆ ಬಂದಿತ್ತು ಎಂಬ ವರದಿ ಸಂಚಲನಕ್ಕೆ ಕಾರಣವಾಗಿದ್ದು, ಪ್ರತಿ ಪಕ್ಷಗಳು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ನವದೆಹಲಿ(ಡಿ.14): ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಹಾಗೂ ತಮ್ಮನ್ನು ಪದಚ್ಯುತಗೊಳಿಸಲು ಪಾಕಿಸ್ತಾನ ಸಂಚು ರೂಪಿಸಿದೆ, ಈ ಕುರಿತ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು ಎಂದು ಆರೋಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ಮುಜುಗರವಾಗುವಂತಹ ಬೆಳವಣಿಗೆಯೊಂದು ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಜರಾತ್ ಮತದಾರರ ಗಮನ ಸೆಳೆಯಲು ಮೋದಿ ಹಾರಾಟ ನಡೆಸಿದ ಸೀ ಪ್ಲೇನ್, ಪಾಕಿಸ್ತಾನದ ಕರಾಚಿಯಿಂದ ಗುಜರಾತಿಗೆ ಬಂದಿತ್ತು ಎಂಬ ವರದಿ ಸಂಚಲನಕ್ಕೆ ಕಾರಣವಾಗಿದ್ದು, ಪ್ರತಿ ಪಕ್ಷಗಳು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಮೋದಿ ಪ್ರಯಾಣಿಸಿದ ಕೊಡಿಯಾಕ್ 100 ವಿಮಾನ ಕರಾಚಿಯಲ್ಲಿ ಮಾಸಾರಂಭದಿಂದ ನಿಂತಿತ್ತು.

ಡಿ.3ರಂದು ಹಾರಾಟ ಆರಂಭಿಸಿ, ಅದೇ ದಿನ ಸಂಜೆ ಮುಂಬೈಗೆ ಬಂದಿತ್ತು. ಮರುದಿನ ಅಹಮದಾಬಾದ್ ತಲುಪಿ, ಮಂಗಳವಾರ ಮೋದಿ ಅವರನ್ನು ಹೊತ್ತು ಸಾಗಿತ್ತು.