ಕನ್ನಡಿಗರ ಕೆಲಸ ಕಿತ್ತುಕೊಂಡ ಮೋದಿ : ರಾಹುಲ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Jul 2018, 12:43 PM IST
PM Modis Rafale Deal Took Away Future Of Karnataka Youths Says Rahul Gandhi
Highlights

ರಫೇಲ್ ಯುದ್ಧ ವಿಮಾನ ಖರೀದಿ ವಿಷಯದಲ್ಲಿ ರಕ್ಷಣಾ ಸಚಿವರು ಮತ್ತು ಮೋದಿ ದೇಶದ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ. ಯುದ್ಧ ವಿಮಾನ ನಿರ್ಮಿಸುವ ಗುತ್ತಿಗೆಯನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ತಪ್ಪಿಸುವ ಮೂಲಕ ಕರ್ನಾಟಕದ ಯುವಕರಿಗೆ ಉದ್ಯೋಗ ತಪ್ಪಿಸಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ: ರಫೇಲ್ ಯುದ್ಧ ವಿಮಾನ ನಿರ್ಮಾಣ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಯುವಕರ ಕೆಲಸ ಕಿತ್ತು ಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. 

ಅವಿಶ್ವಾಸ ಗೊತ್ತುವಳಿ ಮೇಲೆ ಮಾತಾಡಿದ ರಾಹುಲ್, ‘ರಫೇಲ್ ಯುದ್ಧ ವಿಮಾನ ಖರೀದಿ ವಿಷಯದಲ್ಲಿ ರಕ್ಷಣಾ ಸಚಿವರು ಮತ್ತು ಮೋದಿ ದೇಶದ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ. ಯುದ್ಧ ವಿಮಾನ ನಿರ್ಮಿಸುವ ಗುತ್ತಿಗೆ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ತಪ್ಪಿಸುವ ಮೂಲಕ ಕರ್ನಾಟಕದ ಯುವಕರಿಗೆ ಉದ್ಯೋಗ ತಪ್ಪಿಸಿದ್ದಾರೆ. 

ಒಂದೂ ವಿಮಾನ ತಯಾರಿಸದ, 30000 ಕೋಟಿ ರು. ಸಾಲ ಹೊಂದಿರುವ ತಮ್ಮ ಆಪ್ತ ಉದ್ಯಮಿಗೆ ರಫೇಲ್ ಯುದ್ಧ ವಿಮಾನ ನಿರ್ಮಾಣ ಗುತ್ತಿಗೆ ಕೊಡಿಸಿದ್ದಾರೆ’ ಎಂದು ಆರೋಪಿಸಿದರು.  

loader