ಭಾರತ-ರಷ್ಯಾದ 18ನೇ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಸೇಂಟ್‌ಪೀಟರ್ಸ್‌ಬರ್ಗ್‌ಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ, ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್‌, ‘ಕ್ಷಿಪಣಿ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಭಾರತದೊಂದಿಗೆ ರಷ್ಯಾ ಹೊಂದಿರುವಷ್ಟುಆತ್ಮೀಯ ಸಂಬಂಧವನ್ನು ಇತರೆ ಬೇರೆ ಯಾವ ರಾಷ್ಟ್ರಗಳೊಂದಿಗೆ ಹೊಂದಿಲ್ಲ,' ಎಂದು ಹೇಳಿದ್ದಾರೆ. ಆದರೆ, ಪಾಕಿಸ್ತಾನದೊಂದಿಗೆ ಹೊಂದಿರುವ ಯಾವುದೇ ಸಂಬಂಧವು, ಭಾರತ-ರಷ್ಯಾ ನಡುವಿನ ಯಾವುದೇ ವಾಣಿಜ್ಯೋದ್ಯಮಗಳ ಮೇಲೆ ಪರಿಣಾಮ ಬೀರದು ಎಂಬುದಾಗಿಯೂ ಪುಟಿನ್‌ ಸ್ಪಷ್ಟಪಡಿಸಿದ್ದಾರೆ.
ಸೇಂಟ್ ಪೀಟರ್ಸ್ಬರ್ಗ್: ರಷ್ಯಾದ ಬಾಂಧವ್ಯ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಆದರೆ, ಪಾಕಿಸ್ತಾನದೊಂದಿಗೆ ರಷ್ಯಾಗಾಢವಾದ ಯಾವುದೇ ಮಿಲಿಟರಿ ಸಂಬಂಧ ಹೊಂದಿಲ್ಲ. ವಿಶ್ವಾಸ ಆಧಾರಿತವಾದ ಭಾರತದ ಹಳೆಯ ಸ್ನೇಹ ಸಂಬಂಧವನ್ನು ಮಾಸ್ಕೋ ದುರ್ಬಲಗೊಳಿಸುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಹೇಳಿದ್ದಾರೆ.
ಭಾರತ-ರಷ್ಯಾದ 18ನೇ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಸೇಂಟ್ಪೀಟರ್ಸ್ಬರ್ಗ್ಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ, ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್, ‘ಕ್ಷಿಪಣಿ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಭಾರತದೊಂದಿಗೆ ರಷ್ಯಾ ಹೊಂದಿರುವಷ್ಟುಆತ್ಮೀಯ ಸಂಬಂಧವನ್ನು ಇತರೆ ಬೇರೆ ಯಾವ ರಾಷ್ಟ್ರಗಳೊಂದಿಗೆ ಹೊಂದಿಲ್ಲ,' ಎಂದು ಹೇಳಿದ್ದಾರೆ. ಆದರೆ, ಪಾಕಿಸ್ತಾನದೊಂದಿಗೆ ಹೊಂದಿರುವ ಯಾವುದೇ ಸಂಬಂಧವು, ಭಾರತ-ರಷ್ಯಾ ನಡುವಿನ ಯಾವುದೇ ವಾಣಿಜ್ಯೋದ್ಯಮಗಳ ಮೇಲೆ ಪರಿಣಾಮ ಬೀರದು ಎಂಬುದಾಗಿಯೂ ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಆದರೆ, ಭಾರತ-ಪಾಕಿಸ್ತಾನ ನಡುವಿನ ಜಮ್ಮು-ಕಾಶ್ಮೀರ ವಿಚಾರದ ಕುರಿತು ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಭಾರತಕ್ಕೆ ಸೇರಿದ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಪಾಕಿಸ್ತಾನ ಪ್ರಚೋದಿಸುತ್ತಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕಿದ್ದು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ರಷ್ಯಾ ಸದಾ ಬೆಂಬಲ ನೀಡಲಿದೆ ಎಂದು ಪುಟಿನ್ ಭರವಸೆ ನೀಡಿದ್ದಾರೆ.
ಭಾರತ- ರಷ್ಯಾದಿಂದ ಜಂಟಿ ಕ್ರೆಡಿಟ್ ರೇಟಿಂಗ್ ಏಜೆನ್ಸಿ:
ಕೆಲ ಜಾಗತಿಕ ಹಣಕಾಸು ರೇಟಿಂಗ್ ಏಜೆನ್ಸಿಗಳು ತಾರತಮ್ಯ ನೀತಿ ಅನುಸರಿಸುತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ, ಭಾರತ ಮತ್ತು ರಷ್ಯಾ ಜಂಟಿಯಾಗಿ ರೇಟಿಂಗ್ ಏಜೆನ್ಸಿ ಆರಂಭಕ್ಕೆ ನಿರ್ಧರಿಸಿವೆ. ಈ ಸಂಸ್ಥೆಯನ್ನು ಯಾವುದೇ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಿಸಲು ಎರಡೂ ದೇಶಗಳು ಒಪ್ಪಿವೆ.
2 ಹೊಸ ಅಣುಘಟಕಗಳಿಗೆ ಸಹಿ:
ತಮಿಳುನಾಡಿನ ಕೂಡಂಕುಲಂ ಅಣು ವಿದ್ಯುತ್ ಘಟಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರಷ್ಯಾ ದೇಶವು, ಘಟಕದ ವಿಸ್ತರಣೆಗೆ ಮತ್ತಷ್ಟುಸಹಾಯಹಸ್ತ ಚಾಚಿದೆ. ಘಟಕದ 5 ಮತ್ತು 6ನೇ ಘಟಕ ಸ್ಥಾಪನೆಗೆ ರಷ್ಯಾ ಮುಂದಾಗಿದ್ದು, ಈ ಸಂಬಂಧ ಭಾರತದ ಜೊತೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದೆ.
ರಷ್ಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ರಷ್ಯಾ ವಾರ್ಷಿಕ ಶೃಂಗದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ, ಒಪ್ಪಂದಕ್ಕೆ ಮೊಹರು ಬಿತ್ತು. 5 ಮತ್ತು 6ನೇ ಘಟಕಗಳು ತಲಾ 1000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಲಿವೆ.
ಭಾರತದ ಎನ್ಎಸ್ಜಿ ಸದಸ್ಯತ್ವಕ್ಕೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ರಷ್ಯಾ ಇದೇ ವೇಳೆ ಬೆಂಬಲ ವ್ಯಕ್ತಪಡಿಸಿತು.
