ಪ್ರಧಾನ ನರೇಂದ್ರ ಮೋದಿ ಯುರೋಪಿನ ನಾಲ್ಕು ದೇಶಗಳಿಗೆ 6 ದಿನಗಳ ಪ್ರವಾಸ ಕೈಗೊಂಡಿದ್ದು ಇಂದು ಬೆಳಿಗ್ಗೆ ಇಲ್ಲಿಂದ ಹೊರಟಿದ್ದಾರೆ. 6 ದಿನಗಳ ಪ್ರವಾಸದಲ್ಲಿ ಜರ್ಮನಿ, ಸ್ಪೇನ್, ರಷ್ಯಾ ಹಾಗೂ ಫ್ರಾನ್ಸ್ ಗೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಜರ್ಮನಿಗೆ ಭೇಟಿ ನೀಡಲಿದ್ದು ಚಾನ್ಸಲರ್ ಏಂಜೆಲಾ ಮಾರ್ಕೆಲ್ ರನ್ನು ಭೇಟಿ ಮಾಡಿ ಪ್ರವಾಸ ಆರಂಭಿಸಲಿದ್ದಾರೆ. ಇಂದು ಸಂಜೆ ಮಾರ್ಕೆಲ್ ಜೊತೆ ಸಭೆ ಆಯೋಜಿಸಲಾಗಿದೆ.
ನವದೆಹಲಿ (ಮೇ.29): ಪ್ರಧಾನ ನರೇಂದ್ರ ಮೋದಿ ಯುರೋಪಿನ ನಾಲ್ಕು ದೇಶಗಳಿಗೆ 6 ದಿನಗಳ ಪ್ರವಾಸ ಕೈಗೊಂಡಿದ್ದು ಇಂದು ಬೆಳಿಗ್ಗೆ ಇಲ್ಲಿಂದ ಹೊರಟಿದ್ದಾರೆ. 6 ದಿನಗಳ ಪ್ರವಾಸದಲ್ಲಿ ಜರ್ಮನಿ, ಸ್ಪೇನ್, ರಷ್ಯಾ ಹಾಗೂ ಫ್ರಾನ್ಸ್ ಗೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಜರ್ಮನಿಗೆ ಭೇಟಿ ನೀಡಲಿದ್ದು ಚಾನ್ಸಲರ್ ಏಂಜೆಲಾ ಮಾರ್ಕೆಲ್ ರನ್ನು ಭೇಟಿ ಮಾಡಿ ಪ್ರವಾಸ ಆರಂಭಿಸಲಿದ್ದಾರೆ. ಇಂದು ಸಂಜೆ ಮಾರ್ಕೆಲ್ ಜೊತೆ ಸಭೆ ಆಯೋಜಿಸಲಾಗಿದೆ.
ಯುರೋಪಿಯನ್ ಒಕ್ಕೂಟಕ್ಕೆ ಇದು ಮೋದಿಯವರ ಮೊದಲ ಭೇಟಿಯಾಗಿದೆ. ಯುರೋಪ್-ಭಾರತದ ನಡುವೆ ಉಚಿತ ವ್ಯಾಪಾರ ಒಪ್ಪಂದ, ಹೂಡಿಕೆ, ತಂತ್ರಜ್ಞಾನ ಮತ್ತು ಭಯೋತ್ಪಾದನೆ, ವ್ಯಾಪಾರದ ಬಗ್ಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಕ್ಕೆ ಮೋದಿ ಹೊಸ ಭಾಷ್ಯ ಬರೆಯಲಿದ್ದಾರೆ ಎಂದು ಬಿಂಬಿಸಲಾಗಿದೆ. ನಾಳೆ ಬರ್ಲಿನ್ ನಲ್ಲಿ ಸೇನಾ ಗೌರವದೊಂದಿಗೆ ಮೋದಿಯವರನ್ನು ಸ್ವಾಗತಿಸಲಿದ್ದಾರೆ. ನಾಳೆ ಮೋದಿಯವರಿಗೆ ಮಾರ್ಕೆಲ್ ವಿಶೇಷ ಭೋಜನಕೂಟ ಆಯೋಜಿಸಿದ್ದು ಹಿರಿಯ ಬ್ಯಸಿನೆಸ್ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದು ಚರ್ಚೆ ನಡೆಸಲಿದ್ದಾರೆ.
ಮಧ್ಯಾಹ್ನ ಇಂಡೋ-ಜರ್ಮನ್ ಬ್ಯಸಿನೆಸ್ ಫೋರಮನ್ನು ಮೋದಿ ಉದ್ಘಾಟಿಸಿ ಸಿಇಒಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
