ನವದೆಹಲಿ(ಜೂ.05): ಪ್ರಧಾನಿ ಸ್ಥಾನ ಗಟ್ಟಿ ಮಾಡಿಕೊಂಡಿರುವ ಮೋದಿ, ಇದೀಗ ತ್ರಿಕೋನಾಸನ ಯೋಗ ಮಾಡುವಲ್ಲಿ ಮಗ್ನರಾಗಿದ್ದಾರೆ.

ಹೌದು, ಇದೇ ಜೂನ್ 21 ರಂದು ವಿಶ್ವ ಯೋಗ ದಿನ ಆಚರಣೆ ಮಾಡಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ಮೋದಿ ತ್ರಿಕೋನಾಸನ ಮಾಡುವ ಆ್ಯನಿಮೆಟೆಡ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

3ಡಿ ಆ್ಯನಿಮೆಟೆಡ್ ವಿಡಿಯೋದಲ್ಲಿ ಮೋದಿ ತ್ರಿಕೋನಾಸನ ಮಾಡುತ್ತಿದ್ದು, ಯೋಗದ ಮಹತ್ವ ಸಾರುವ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಖುದ್ದು ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಲಕ್ಷಾಂತರ ಜನರು ಈ ವಿಡಿಯೋವನ್ನು ವಿಕ್ಷೀಸಿದ್ದಾರೆ.

ಜೂನ್ 21 ನ್ನು ವಿಶ್ವ ಯೋಗ ದಿನವನ್ನಾಗಿ ವಿಶ್ವಸಂಸ್ಥೆ 2014ರಲ್ಲಿ ಘೋಷಿಸಿತು. ಈ ದಿನ ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.