ನಾಳೆ ಬೆಳಿಗ್ಗೆ ಕರ್ನಾಟಕದ ಸಂಸದರ ಜೊತೆಗೆ ಪಿಎಂ ಮೋದಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಿದ್ದಾರೆ. ಸಂಸದರ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ.
ಬೆಂಗಳೂರು (ಮಾ.30): ನಾಳೆ ಬೆಳಿಗ್ಗೆ ಕರ್ನಾಟಕ ಸಂಸದರ ಜೊತೆ ಪಿಎಂ ಮೋದಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಿದ್ದಾರೆ. ಸಂಸದರ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ.
ನಾಳೆ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಪ್ರಧಾನಿ ಅಧಿಕೃತ ನಿವಾಸ 7 ಲೋಕ ಕಲ್ಯಾಣ್ ಮಾರ್ಗದಲ್ಲಿ ನರೇಂದ್ರ ಮೋದಿ ಕರ್ನಾಟಕ, ಜಾರ್ಖಂಡ್, ಒರಿಸ್ಸಾ, ತಮಿಳುನಾಡು ಹಾಗೂ ತೆಲಂಗಾಣ ಸಂಸದರನ್ನು ಉಪಾಹಾರಕ್ಕೆ ಕರೆದಿದ್ದು ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಂಸದರ ಜೊತೆ ಮುಕ್ತ ಸಂವಾದ ನಡೆಸಲಿದ್ದಾರೆ.
ಕಳೆದ ಹತ್ತು ದಿನಗಳಿಂದ ಪ್ರಧಾನಿ ಮೋದಿ ಬಹುತೇಕ ರಾಜ್ಯಗಳ ಬಿಜೆಪಿ ಸಂಸದರೊಂದಿಗೆ ಚರ್ಚೆ ನಡೆಸುತ್ತಿದ್ದು ಗ್ರೌಂಡ್ ನಲ್ಲಿನ ಪರಿಸ್ಥಿತಿ ಬಗ್ಗೆ ಸಂಸದರ ಅಭಿಪ್ರಾಯವನ್ನು ಕೇಳುವುದರ ಜೊತೆಗೆ 2019 ರ ಲೋಕಸಭೆಗೆ ತಯಾರಿ ಕುರಿತು ಮೋದಿ ಕೆಲ ಟಿಪ್ಸ್ ಗಳನ್ನು ಕೂಡ ನೀಡುತ್ತಿದ್ದಾರೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.
2018 ರ ವಿಧಾಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವ ಸಂಸದರಿಗೆ ಮೋದಿ ಸ್ಪಷ್ಟವಾಗಿ ಇಲ್ಲ ಎಂದು ಹೇಳುವ ಸಾಧ್ಯತೆಗಳು ಕೂಡ ಇದ್ದು ಪ್ರಧಾನಿ ಎದುರು ಬಹಿರಂಗವಾಗಿ ಸಂಸದರು ಎಲ್ಲ ವಿಷಯಗಳನ್ನು ಪ್ರಸ್ತಾಪಿಸುತ್ತಾರೆಯೇ ಎನ್ನುವುದು ನಾಳೆ ಸ್ಪಷ್ಟವಾಗಲಿದೆ.
