ತಮ್ಮ ದೇಶಕ್ಕೆ ಭೇಟಿ ಕೊಟ್ಟ ಪ್ರಪ್ರಥಮ ಭಾರತೀಯ ಪ್ರಧಾನಿಯನ್ನು ಸಂತುಷ್ಟಪಡಿಸಲು ಆತಿಥೇಯ ಇಸ್ರೇಲ್ ದೇಶವು ಯಾವುದೇ ಅವಕಾಶವನ್ನು ಕೈಚೆಲ್ಲುತ್ತಿಲ್ಲ. ಪ್ರಧಾನಿ ಮೋದಿಯವರ ಆಹಾರಾಭ್ಯಾಸವನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್, ವಿಶೇಷ ಬಾನಸಿಗರ ತಂಡವನ್ನು ರಚಿಸಿದೆ.

ಜೆರುಸಲೇಮ್ (ಜು. 05): ತಮ್ಮ ದೇಶಕ್ಕೆ ಭೇಟಿ ಕೊಟ್ಟ ಪ್ರಪ್ರಥಮ ಭಾರತೀಯ ಪ್ರಧಾನಿಯನ್ನು ಸಂತುಷ್ಟಪಡಿಸಲು ಆತಿಥೇಯ ಇಸ್ರೇಲ್ ದೇಶವು ಯಾವುದೇ ಅವಕಾಶವನ್ನು ಕೈಚೆಲ್ಲುತ್ತಿಲ್ಲ.

ಪ್ರಧಾನಿ ಮೋದಿಯವರ ಆಹಾರಾಭ್ಯಾಸವನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್, ವಿಶೇಷ ಬಾನಸಿಗರ ತಂಡವನ್ನು ರಚಿಸಿದೆ. ಪ್ರಧಾನಿ ಮೋದಿಗೆಂದೇ ಇಸ್ರೇಲ್ ಭಾರತೀಯ ‘ಮಾ ಕಾ ಖಾನ’ (ಅಮ್ಮನ ಕೈ ತುತ್ತು) ವನ್ನು ತಯಾರಿಸಿದೆ.

ಮೋದಿಯವರು ಸರಳವಾದ ಆಹಾರವನ್ನು ಸೇವಿಸುತ್ತಾರೆ. ಅವರು ಮೊಟ್ಟೆಯನ್ನೂ ತಿನ್ನಲ್ಲ, ಹಾಗೂ ಶುದ್ಧ ಸಸ್ಯಹಾರಿಯಾಗಿದ್ದಾರೆ ಎಂದು ನಮಗೆ ತಿಳಿದಿದೆ. ಆದುದರಿಂದ ಅವರಿಗಾಗಿಯೇ ವಿಶೇಷವಾದ ಅನ್ನ ಮತ್ತು ದಾಲ್’ಅನ್ನು ತಯಾರಿಸಲಾಗುತ್ತಿದೆ, ಎಂದು ಪ್ರಧಾನ ಬಾಣಸಿಗ ಡೇವಿಡ್ ಬಿಟಾಬನ್ ಹೇಳಿದ್ದಾರೆ.