ಡೆಹ್ರಾಡೂನ್(ನ.7): ದೀಪಾವಳಿ ಪ್ರಯುಕ್ತ ಭಾರತ-ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಆಚರಿಸಲಿದ್ದಾರೆ. 

ಈ ಹಿನ್ನೆಲೆಯಲ್ಲಿ ಪ್ರಧನ್ಮಂತ್ರಿ ನರೇಂದ್ರ ಮೋದಿ ಹೆಲಿಕಾಪ್ಟರ್‌ನಲ್ಲಿ  ಡೆಹ್ರಾಡೂನ್‌ಗೆ ಬಂದಿಳಿದಿದ್ದು, ಕೇದಾರನಾಥ್‌ನಿಗೆ ಪೂಜೆ ಸಲ್ಲಿಸಿದ್ದಾರೆ.

ನವದೆಹಲಿಯಿಂದ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ  ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಸ್ವಾಗತಿಸಿದರು.

ಕೇದಾರನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಮೋದಿ, 2013 ರಲ್ಲಿ ಉಂಟಾದ ಭಾರೀ ಪ್ರವಾಹದ ನಂತರದ ಪುನರ್ ನಿರ್ಮಾಣ ಕಾರ್ಯದ ಪರಿಶೀಲನೆ ನಡೆಸಿದರು.

ಕೇದಾರನಾಥ್ ನಲ್ಲಿ ನಡೆಯುತ್ತಿರುವ ಪುನರ್ ನಿರ್ಮಾಣ ಕೆಲಸಕ್ಕೆ ಪ್ರಧಾನಿ  ಮೋದಿ ವಯಕ್ತಿಕವಾಗಿ ಆಸಕ್ತಿ ತೋರಿದ್ದಾರೆ.ಕಳೆದ ಆರು ತಿಂಗಳಿಂದ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ.