ರಾಜೀವ್ ಗಾಂಧಿ ಚಿಂತನೆ ಮೋದಿಗಿದ್ದಿದ್ದರೆ ಭಾರತ ಉದ್ಧಾರವಾಗುತ್ತಿತ್ತು: ಪರಂ

PM modi should have inculcated Rajeev Gandhi  thoughts says G Parasmeshwar
Highlights

ಪ್ರದಾನಿ ಮೋದಿಯವರು ರಾಜೀವ್ ಗಾಂಧಿಯವರ ಚಿಂತನೆಗಳನ್ನು ಅಳವಡಿಸಿಕೊಂಡರೆ, ಭಾರತ ಪ್ರಗತಿಯ ಪಥದಲ್ಲಿ ನಡೆಯುತ್ತಿತ್ತು. ಅದು ಬಿಟ್ಟು ಅವರು ತಾವು ನಡೆದಿದ್ದೇ ಹಾದಿ ಎಂದು ಹೆಜ್ಜೆ ಇಡುತ್ತಿದ್ದಾರೆ, ಎಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: 'ರಾಜೀವ್ ಗಾಂಧಿ ಚಿಂತನೆಗಳನ್ನು ಪ್ರಧಾನಿ ಮೋದಿ ಅವರು ಅಳವಡಿಸಿಕೊಂಡಿದ್ದರೆ ಭಾರತ ದೇಶವನ್ನು ಹಿಡಿಯೋಕೆ ಆಗ್ತಾ ಇರಲಿಲ್ಲಿ. ಮೋದಿ ತಾವು ನಡೆದಿದ್ದೇ ಹಾದಿ ಎಂಬಂತೆ ವಿಭಿನ್ನ ಮಾರ್ಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ,' ಎಂದು, ಕಾಂಗ್ರೆಸ್ ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಶೆಡ್‌ನಲ್ಲಿ ವಿವಿ ಪ್ಯಾಟ್ ಪತ್ತೆ

' ಬಿಜೆಪಿಗೆ ಸಹಾಯ ಮಾಡಿದ ವರ್ತಕರು, ಸಣ್ಣ ವ್ಯಾಪಾರಸ್ಥರು ಭಯ ಭೀತಿಯಲ್ಲಿದ್ದಾರೆ. ಮುಂದೆ ಆಗಬಹುದಾದ ರಾಜಕೀಯ ಬದಲಾವಣಗಳ ಬಗ್ಗೆ ಆತಂಕರಾಗಿದ್ದಾರೆ,' ಎಂದು ಹೇಳಿದರು.

'ನಾವು ಬಹುಮತ ಗಳಿಸದೇ ಇರಲು ಅನೇಕ ಕಾರಣಗಳಿದೆ. ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ಸ್ವಾರ್ಥಕ್ಕಾಗಿ ನಾವು ಜೆಡಿಎಸ್ ಜೊತೆ ಅಧಿಕಾರ ಹಿಡಿದಿಲ್ಲ.ಬಿಜೆಪಿ ಅಧಿಕಾರಕ್ಕೆ ಬಂದ್ರೆ ಆಗುವ ಅನಾಹುತವನ್ನ ತಪ್ಪಿಸಲು ಪ್ರಯತ್ನಿಸಿದ್ದೇವೆ. ಮುಂದೆ ನಮಗೆ ಪಕ್ಷ ಕಟ್ಟೋದು ಕಠಿಣ ಇರಬಹುದು. ಕಷ್ಟ ಬರ್ತಿರೋದು ನನಗೆ ಕಾಣ್ತಿದೆ. ಜೆಡಿಎಸ್ ಜೊತೆ ಸರ್ಕಾರ ಮಾಡಿದೆ ಎಂದು ಬೇಸರ ಮಾಡಿಕೊಳ್ಳಬೇಡಿ,' ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಪಾಟೀಲ್‌ ಮಂತ್ರಿಗಿರಿಗೆ ಶ್ಯಾಮನೂರು ವಿರೋಧ

 

loader