‘ಚುನಾವಣೆ ಸೋಲಿಗೆ ಇವಿಎಂ ದೂರುವುದು ಹೊಸ ಕಾಯಿಲೆ’| ರಾಜ್ಯಸಭೆಯಲ್ಲಿ ವಿಪಕ್ಷಗಳ ಬೆವರಿಳಿಸಿದ ಪ್ರಧಾನಿ ಮೋದಿ| ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ| ಬಿಜೆಪಿ ಗೆಲುವಿಗೆ ಇವಿಎಂ ಕಾರಣ ಎನ್ನುತ್ತಿವೆ ವಿಪಕ್ಷಗಳು| ಚುನಾವಣೆ ಪ್ರಕ್ರಿಯೆಯಲ್ಲಿ ಆದ ಸುಧಾರಣೆಗಳನ್ನು ಶ್ಲಾಘಿಸಿದ ಪ್ರಧಾನಿ|

ನವದೆಹಲಿ(ಜೂ.26): ಚುನಾವಣೆ ಸೋಲನ್ನು ಒಪ್ಪಿಕೊಳ್ಳದ ಮನಸ್ಸುಗಳು ಇವಿಎಂ ಮಶೀನ್’ಗಳನ್ನು ದೂರುವುದನ್ನೇ ಕಾಯಕ ಮಾಡಿಕೊಂಡಿವೆ ಎಂದು ಪ್ರಧಾನಿ ಮೋದಿ ವಿಪಕ್ಷಗಳನ್ನು ಚುಚ್ಚಿದ್ದಾರೆ.

ರಾಜ್ಯಸಭೆಯಲ್ಲಿ ಇಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿಯ ಚುನಾವಣೆ ಗೆಲುವಿಗೆ ಇವಿಎಂ ದೂರುವುದು ಒಂದು ಹೊಸ ಕಾಯಿಲೆ ಎಂದು ಕುಹುಕವಾಡಿದರು.

Scroll to load tweet…

ಹಿಂದೆ ಬಿಜೆಪಿ ಸದನದಲ್ಲಿ ಕೇವಲ ಎರಡು ಸದಸ್ಯರನ್ನು ಹೊಂದಿತ್ತು. ಆಗಲೂ ನಮ್ಮನ್ನು ಕುಹುಕವಾಡುತ್ತಿದ್ದ ಕೆಲವರು, ಇಂದು ಬಿಜೆಪಿಯ ಅಗಾಧ ಶಕ್ತಿ ಕಂಡು ಇವಿಎಂ ನ್ನು ದೂರುತ್ತಿದ್ದಾರೆ ಎಂದು ಮೋದಿ ಕಾಂಗ್ರೆಸ್’ಗೆ ತಿರುಗೇಟು ನೀಡಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಆಗಿರುವ ಸುಧಾರಣೆಗಳು ನಿಜಕ್ಕೂ ಶ್ಲಾಘನೀಯ ಎಂದ ಮೋದಿ, ತಂತ್ರಜ್ಞಾನದ ಬೆಳವಣಿಗೆಯಿಂದ ಮತದಾನ ಶಾಂತಿಯುತವಾಗಿ ಮತ್ತು ಸುರಕ್ಷಿತವಾಗಿ ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.