ಕಾಂಗ್ರೆಸ್ ಸೊಕ್ಕಿನ ನುಡಿಗಳಿಗೆ ಪ್ರಧಾನಿ ಮೋದಿ ತಿರುಗೇಟು| ‘ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ, ಭಾರತ ಸೋತಿದೆ’| ವಯನಾಡಿನಲ್ಲಿ ಭಾರತ ಸೋತಿದೆಯೇ ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ| ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮೋದಿ ಭಾಷಣ| ರಾಜ್ಯಸಭೆಯಲ್ಲಿ ಮಾತಿನ ಮೂಲಕವೇ ಕಾಂಗ್ರೆಸ್ ಬೆವರಿಳಿಸಿದ ಪ್ರಧಾನಿ| ನವಭಾರತದ ನಿರ್ಮಾಣಕ್ಕೆ ಎಲ್ಲ ಸದಸ್ಯರ ಬೆಂಬಲ ಕೋರಿದ ಮೋದಿ|

ನವದೆಹಲಿ(ಜೂ.26): ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ, ಭಾರತ ಸೋತಿದೆ ಎಂಬ ವಿಪಕ್ಷಗಳ ಕುಹುಕದ ಮಾತಿಗೆ ಪ್ರಧಾನಿ ಮೋದಿ ಸೂಕ್ತ ತಿರುಗೇಟು ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಇಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ಚುನಾವಣೆಯಲ್ಲಿ ಭಾರತ ಸೋತಿದೆ ಎಂದಾದರೆ ಕೇರಳದ ವಯನಾಡು ಕ್ಷೇತ್ರದಲ್ಲೂ ಭಾರತ ಸೋತಿದೆಯೇ ಎಂದು ಪ್ರಶ್ನಿಸಿದರು.

Scroll to load tweet…

ಜನಾದೇಶವನ್ನು ಹೀಗಳೆಯುತ್ತಿರುವ ಕಾಂಗ್ರೆಸ್ ಪಕ್ಷದ ಸೊಕ್ಕಿನ ನುಡಿಗಳಿಗೆ ಕಾಲವೇ ಸೂಕ್ತ ತಿರುಗೇಟು ನೀಡಲಿದೆ ಎಂದು ಪ್ರಧಾನಿ ಮೋದಿ ಗುಡುಗಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಎಲ್ಲ ಸದಸ್ಯರ ಭಾಷಣಕ್ಕೆ ಧನ್ಯವಾದ ಸಲ್ಲಿಸಿದ ಮೋದಿ, ನವಭಾರತದ ನಿರ್ಮಾಣಕ್ಕೆ ಪಕ್ಷ, ವಿಪಕ್ಷಗಳ ಜಂಜಾಟದಿಂದ ಮೇಲೆದ್ದು ಬರಬೇಕಿದೆ ಎಂದು ಕರೆ ನೀಡಿದರು.

ವಿಪಕ್ಷಗಳ ಕೊಂಕು ನುಡಿಗಳಿಗೆ ತಮ್ಮದೇ ವ್ಯಂಗ್ಯಭರಿತ ಧಾಟಿಯಲ್ಲಿ ತಿರುಗೇಟು ನೀಡಿದ ಮೋದಿ, ಯಾರಿಗೆ ಯಾವ ಜವಾಬ್ದಾರಿ ಎಂಬುದನ್ನು ಈ ದೇಶದ ಜನತೆ ನಿರ್ಧರಿಸಿದ್ದಾರೆ ಎಂದು ವಿಪಕ್ಷಗಳನ್ನು ಕೆಣಕಿದರು.

Scroll to load tweet…

ಇದೇ ವೇಳೆ ಸರ್ಕರದ ಮುಂದಿನ ಐದು ವರ್ಷಗಳ ಅಭಿವೃದ್ಧಿ ದಾರಿಯನ್ನು ಬಿಚ್ಚಿಟ್ಟ ಪ್ರಧಾನಿ, ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಾ ಭಾರತವನ್ನು ಸದೃಢಗೊಳಿಸುವ ಈ ಮಹಾನ್ ಕಾರ್ಯದಲ್ಲಿ ಕೈಜೋಡಿಸುವಂತೆ ಎಲ್ಲ ಸದಸ್ಯರಿಗೆ ಕರೆ ನೀಡಿದರು.