ಇತ್ತೀಚೆಗಷ್ಟೇ ಸಂಸದರ ಕಾರ್ಯನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಈಗ ತಮ್ಮ ಸರ್ಕಾರದ ಕಾರ್ಯಕ್ರಮಗಳು ನೆಲ ಮಟ್ಟದಲ್ಲಿ ಹೇಗೆ ಅನುಷ್ಠಾನಗೊಂಡಿವೆ ಹಾಗೂ ಅವುಗಳ ಬಗ್ಗೆ ಜನರ ಪ್ರತಿಕ್ರಿಯೆ ಏನು ಎಂದು ಬಯಸಿ ‘ನಮೋ ಆ್ಯಪ್’ ಮೂಲಕ ಬಿಜೆಪಿ ಸಂಸದರಿಗೆ 6 ಪ್ರಶ್ನೆಗಳನ್ನು ಕೇಳಿದ್ದಾರೆ.

ನವದೆಹಲಿ: ಇತ್ತೀಚೆಗಷ್ಟೇ ಸಂಸದರ ಕಾರ್ಯನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಈಗ ತಮ್ಮ ಸರ್ಕಾರದ ಕಾರ್ಯಕ್ರಮಗಳು ನೆಲ ಮಟ್ಟದಲ್ಲಿ ಹೇಗೆ ಅನುಷ್ಠಾನಗೊಂಡಿವೆ ಹಾಗೂ ಅವುಗಳ ಬಗ್ಗೆ ಜನರ ಪ್ರತಿಕ್ರಿಯೆ ಏನು ಎಂದು ಬಯಸಿ ‘ನಮೋ ಆ್ಯಪ್’ ಮೂಲಕ ಬಿಜೆಪಿ ಸಂಸದರಿಗೆ 6 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಜನವರಿ 11 ರೊಳಗೆ ಉತ್ತರಿಸಬೇಕು ಎಂದು ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಸದರ ಉತ್ತರಗಳನ್ನು ಆಧರಿಸಿ ಯೋಜನೆ ಅನುಷ್ಠಾನದಲ್ಲಿ ಲೋಪಗಳಾಗಿವೆಯೇ ಎಂದು ತಿಳಿಯಲು ಹಾಗೂ ಲೋಪಗಳಾಗಿದ್ದರೆ ಅವುಗಳನ್ನು ತಿದ್ದಿಕೊಳ್ಳುವುದು ಮೋದಿ ಉದ್ದೇಶವಾಗಿದೆ. ಅಲ್ಲದೆ, ಸಂಸದರ ಕಾರ್ಯನಿರ್ವಹಣೆಯನ್ನೂ ಈ ಮೂಲಕ ಅಳೆಯಲು ಮೋದಿ ಉದ್ದೇಶ ಇರಿಸಿಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ಹೇಳಿದೆ.

*ನಿಮ್ಮ ಪ್ರದೇಶದಲ್ಲಿ ಯಾವ ಸರ್ಕಾರಿ ಯೋಜನೆಗಳು ಹೆಚ್ಚು ಪ್ರಭಾವ ಬೀರಿವೆ?

* ನಿಮ್ಮ ಪ್ರದೇಶದಲ್ಲಿ ಜಾರಿಯಾಗಿರುವ ಸರ್ಕಾರಿ ಯೋಜನೆಗಳನ್ನು ನೀವು ಹೇಗೆ ವಿಶ್ಲೇಷಿಸುವಿರಿ?

* ಫಲಾನುಭವಿಗಳೊಂದಿಗೆ ನೀವು ಸಂಪರ್ಕದಲ್ಲಿದ್ದೀರಾ? ಖುದ್ದಾಗಿ, ಇ-ಮೇಲ್ ಮೂಲಕ ಅಥವಾ ಎಸ್ಸೆಮ್ಮೆಸ್ ಮೂಲಕ?

* ಜನರ ಪ್ರತಿಕ್ರಿಯೆ ಅರಿಯಲು ಯಾವ ವಿಧಾನ ಸೃಷ್ಟಿಸಿದ್ದೀರಿ? ಪಕ್ಷಕ್ಕೆ ಪ್ರತಿಕ್ರಿಯೆ ಸಲ್ಲಿಸಿರುವಿರಾ?

* ನರೇಂದ್ರ ಮೋದಿ ಆ್ಯಪ್‌ನಲ್ಲಿ ಸರ್ಕಾರದ ಯೋಜನೆಗಳ ಎಲ್ಲ ಮಾಹಿತಿ ಇದೆಯೇ?

* ನೀವು ಏನಾದರೂ ಸಲಹೆ ನೀಡಬಯಸುವಿರಾ?