ಜೂನ್ 21 ಈ ದಿನ ಇಡೀ ಭಾರತಕ್ಕೆ ಒಂದು ರೀತಿಯ ಹೆಮ್ಮೆಯ ದಿನ. ಪ್ರಧಾನಿ ಮೋದಿ ಪರಿಕಲ್ಪನೆಯ ವಿಶ್ವ ಯೋಗ ದಿನಕ್ಕೆ ಜಾಗತಿಕ ಮನ್ನಣೆ ದೊರೆತ ಮಹತ್ವದ ದಿನವಿದು. ಈ ಯೋಗ ದಿನವನ್ನ  ದೇಶ ಸೇರಿದಂತೆ ವಿಶ್ವದ 180 ರಾಷ್ಟ್ರಗಳಲ್ಲಿ  ಯೋಗ ದಿನ ಆಚರಿಸಲಿವೆ.

ಲಖನೌ(ಜೂ.21): ಜೂನ್ 21 ಈ ದಿನ ಇಡೀ ಭಾರತಕ್ಕೆ ಒಂದು ರೀತಿಯ ಹೆಮ್ಮೆಯ ದಿನ. ಪ್ರಧಾನಿ ಮೋದಿ ಪರಿಕಲ್ಪನೆಯ ವಿಶ್ವ ಯೋಗ ದಿನಕ್ಕೆ ಜಾಗತಿಕ ಮನ್ನಣೆ ದೊರೆತ ಮಹತ್ವದ ದಿನವಿದು. ಈ ಯೋಗ ದಿನವನ್ನ ದೇಶ ಸೇರಿದಂತೆ ವಿಶ್ವದ 180 ರಾಷ್ಟ್ರಗಳಲ್ಲಿ ಯೋಗ ದಿನ ಆಚರಿಸಲಿವೆ.

ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ನವದೆಹಲಿಯ ರಾಜಪಥ್‌'ನಲ್ಲಿ, 2ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಚಂಡೀಗಢದಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಲಖನೌದ ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ಆಯೋಜಿಸಲಾಗಿದೆ. ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಜತೆ 51 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರು.

ಸಮಾರಂಭದಲ್ಲಿ ಜನತೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ ದೇಹ, ಮನಸ್ಸು ಮತ್ತು ಆತ್ಮವನ್ನು ಒಟ್ಟುಗೂಡಿಸುವ ಸಾಮರ್ಥ್ಯ ಹೊಂದಿರುವ ಯೋಗ ಭಾಷಾ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಿ ಇಂದು ಜಾಗತಿಕ ಸಮುದಾಯವನ್ನು ಒಂದು ಗೂಡಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ ಎಂದರು.

ವಿಶ್ವ ಯೋಗ ದಿನದ ಹಾದಿ..

ವಿಶ್ವಸಂಸ್ಥೆಯ 69ನೇ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಸ್ತಾವನೆ ಮಂಡಿಸಲಾಯ್ತು. 2014ರ ಸೆ.27ರಂದು ಯುನೆಸ್ಕೋ ಸಭೆ ಉದ್ದೇಶಿ ಮಾತನಾಡಿದ್ದ ಪ್ರಧಾನಿ ಮೋದಿ, ಜೂನ್ 21ನ್ನು ವಿಶ್ವ ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸುವಂತೆ ಒತ್ತಾಯ ಮಾಡಿದ್ದರು. ಮೋದಿಯ ಈ ಪ್ರಸ್ತಾಪಕ್ಕೆ ವಿಶ್ವಸಂಸ್ಥೆಯ 177 ಸದಸ್ಯ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದ್ವು. ಬಳಿಕ 2014ರ ಡಿಸೆಂಬರ್ 11ರಂದು ಜೂನ್‌ 21ನ್ನು ವಿಶ್ವ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಣೆ ಮಾಡ್ತು. ಬಳಿಕ 2015 ಜೂನ್ 21ರಂದು ವಿಶ್ವದಾದ್ಯಂತ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯ್ತು.

ಇನ್ನೂ 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇಡೀ ವಿಶ್ವವೇ ಸಜ್ಜಾಗಿದೆ. ಈ ಬಾರಿ ಅಮೆರಿಕ, ಚೀನಾ, ಫ್ರಾನ್ಸ್, ಹಂಗೇರಿ, ಸಿಂಗಾಪುರ್​, ಜಪಾನ್​, ಪಾಕಿಸ್ತಾನ ಸೇರಿದಂತೆ 180 ರಾಷ್ಟ್ರಗಳು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿವೆ.

ಯೋಗದಿಂದಾಗುವ ಪ್ರಯೋಜನಗಳು

ಮುಂಜಾನೆಯೇ ಯೋಗ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಯೋಗದಿಂದ ಮಾಂಸಖಂಡಗಳು ಬಲ ಪಡೆಯುತ್ತವೆ. ಕೈ ಮತ್ತು ಭುಜದ ಸ್ನಾಯುಗಳು ಶಕ್ತಿಯುತವಾಗುತ್ತವೆ. ಮನೋಬಲ ಮತ್ತು ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಯೋಗದಿಂದ ಖಿನ್ನತೆ, ಆತಂಕ, ಉದ್ವೇಗ ದೂರವಾಗುತ್ತೆ. ಯೋಗದಿಂದ ರೋಗನಿರೋಧಕ ಶಕ್ತಿ ವರ್ಧಿಸುತ್ತದೆ. ವೃದ್ಧಾಪ್ಯದ ಖಾಯಿಲೆಗಳಿಂದಲೂ ದೂರ ಇರಬಹುದು.

ಒಟ್ಟಿನಲ್ಲಿ ಇಡೀ ಜಗತ್ತೇ ಭಾರತದ ಯೋಗವನ್ನು ಇಂದು ಆಚರಿಸುತ್ತಿದೆ. ಇಡೀ ವಿಶ್ವದಲ್ಲೇ ಭಾರತಕ್ಕೆ ಯೋಗ ಒಂದು ಬ್ರ್ಯಾಂಡ್ ತಂದುಕೊಟ್ಟಿದೆ. ಈ ಮೂಲಕ ಭಾರತ ಘನತೆಯನ್ನು ಸಾರಿದೆ. ಹೀಗಾಗಿ ಯೋಗ ಎನ್ನುವುದು ಬರೀ ಆರೋಗ್ಯ ದೃಷ್ಟಿ ಮಾತ್ರವಲ್ಲ. ಭಾರತೀಯನ ಜೀವನದ ಒಂದ ಭಾಗವಾಗಿ ಆಗಬೇಕು ಅನ್ನೋ ಈ ದಿನದ ಆಶಯ. ನೀವು ಯೋಗ ದಿನಕ್ಕೆ ಜೈ ಜೋಡಿಸುತ್ತೀರಲ್ಲ.