ತಮಿಳುನಾಡಿನ ರಾಜಕೀಯದಲ್ಲಿ ತನ್ನ ಅಳಿಯದ ಛಾಪು ಮೂಡಿಸಿದ್ದ ಜಯಾ ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿಯೂ ಆಗಮಿಸಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಆಗಮಿಸಿರುವ ನರೇಂದ್ರ ಮೋದಿ ಜಯಲಲಿತಾ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಭಾವುಕರಾದ ಪ್ರಧಾನಿ ಜಯಲಲಿತಾರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಚೆನ್ನೈ(ಡಿ.06): ತಮಿಳುನಾಡು ಸಿಎಂ ಜಯಲಲಿತಾ, ತಮಿಳುನಾಡಿನ 'ಅಮ್ಮ' ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇವರ ಅಂತಿಮ ದರ್ಶನ ಪಡೆಯಲು ಜನಸ್ತೋಮವೇ ಹರಿದು ಬರುತ್ತಿದೆ. ಸಿನಿಮಾ, ರಾಜಕೀಯ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಜಯಲಲಿತಾ ಅಂತಿಮ ದರ್ಶನಕ್ಕೆ ಗಣ್ಯಾತಿಗಣ್ಯರು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ತಮಿಳುನಾಡಿನ ರಾಜಕೀಯದಲ್ಲಿ ತನ್ನ ಅಳಿಯದ ಛಾಪು ಮೂಡಿಸಿದ್ದ ಜಯಾ ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿಯೂ ಆಗಮಿಸಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಆಗಮಿಸಿರುವ ನರೇಂದ್ರ ಮೋದಿ ಜಯಲಲಿತಾ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಭಾವುಕರಾದ ಪ್ರಧಾನಿ ಜಯಲಲಿತಾರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಪ್ರಧಾನಿ ಮೋದಿ ವಾಯುನೆಲೆಯಿಂದ ರಾಜಾಜಿ ಹಾಲ್'ಗೆ ಕೆಂಪು ದೀಪ ಹಾಗೂ ರಾಷ್ಟ್ರ ಧ್ವಜವಿಲ್ಲದ ಕಾರಿನಲ್ಲಿ ತೆರಳಿದ್ದು ವಿಶೇಷವಾಗಿತ್ತು.