Asianet Suvarna News Asianet Suvarna News

2022 ರಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಸ್ವಂತ ಮನೆ: ಮೋದಿ ಆಶ್ವಾಸನೆ

2022 ರೊಳಗೆ ಪ್ರತಿಯೊಬ್ಬ ಭಾರತೀಯನು ಅನುಕೂಲ ಸೌಲಭ್ಯಗಳನ್ನು ಹೊಂದಿರುವ ಸ್ವಂತ ಮನೆಯನ್ನು ಹೊಂದಿರಬೇಕು ಎಂಬುದೇ ನಮ್ಮ ಗುರಿ. ಆದ್ದರಿಂದ ಸರ್ಕಾರ ಈ ದಿಶೆಯತ್ತ  ದಣಿವಿಲ್ಲದೇ ಕೆಲಸ ಮಾಡುತ್ತಿದೆ ಎಂದು  ಅಂಬೇಡ್ಕರ್ ರವರ 126 ನೇ ಜಯಂತಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

PM Modi pays rich tribute to BR Ambedkar says every Indian should have a house by 2022
  • Facebook
  • Twitter
  • Whatsapp

ನವದೆಹಲಿ (ಏ.14): 2022 ರೊಳಗೆ ಪ್ರತಿಯೊಬ್ಬ ಭಾರತೀಯನು ಅನುಕೂಲ ಸೌಲಭ್ಯಗಳನ್ನು ಹೊಂದಿರುವ ಸ್ವಂತ ಮನೆಯನ್ನು ಹೊಂದಿರಬೇಕು ಎಂಬುದೇ ನಮ್ಮ ಗುರಿ. ಆದ್ದರಿಂದ ಸರ್ಕಾರ ಈ ದಿಶೆಯತ್ತ  ದಣಿವಿಲ್ಲದೇ ಕೆಲಸ ಮಾಡುತ್ತಿದೆ ಎಂದು  ಅಂಬೇಡ್ಕರ್ ರವರ 126 ನೇ ಜಯಂತಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ನಾವು 2022 ರ ಕನಸು ಹೊಂದಿದ್ದೇವೆ. ಅಷ್ಟೊತ್ತಿಗೆ ಬಡವರಲ್ಲೇ ಬಡವರು ತಮ್ಮ ಸ್ವಂತ ಸೂರನ್ನು ಹೊಂದಿರಬೇಕು.  ಮನೆಗೆ ವಿದ್ಯುತ್, ನೀರು ಹಾಗೂ ಇತರೆ ಸೌಲಭ್ಯಗಳನ್ನು ಹೊಂದಿರಬೇಕು.  ಮನೆಯ ಸಮೀಪದಲ್ಲಿಯೇ ಶಾಲೆ, ಆಸ್ಪತ್ರೆ ಇರಬೇಕು ಎಂದು ಮೋದಿ ಹೇಳಿದ್ದಾರೆ.  

Follow Us:
Download App:
  • android
  • ios