Asianet Suvarna News Asianet Suvarna News

ಪಾಕ್ ಅಧ್ಯಕ್ಷರ ಕೈ ಕುಲುಕಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಾಮ್ನೂನ್ ಹುಸೇನ್ ಪರಸ್ಪರ ಕೈ ಕುಲುಕಿದ್ದಾರೆ.  ಹೌದು ಈ ಹಸ್ತಲಾಘವಕ್ಕೆ ಸಾಕ್ಷಿಯಾಗಿದ್ದು  ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ. ಉಭಯ ರಾಷ್ಟ್ರದ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಈ ಮುಖಾಮುಖಿಯಾಗಿದೆ.  ಶೃಂಗಸಭೆಯಲ್ಲಿ ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ಮೋದಿ ಮಾತುಕತೆ ನಡೆಸಿದರು. ಆದರೆ ಭಾರತ ಮತ್ತು ಪಾಕಿಸ್ತಾನದ ನಾಯಕರ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಯಲಿಲ್ಲ.


 

PM Modi, Pak President Mamnoon Hussain shake hands at SCO Summit, China

ಕ್ವಿಂಗ್ಡಾವೋ:  ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಾಮ್ನೂನ್ ಹುಸೇನ್ ಪರಸ್ಪರ ಕೈ ಕುಲುಕಿದ್ದಾರೆ.  ಹೌದು ಈ ಹಸ್ತಲಾಘವಕ್ಕೆ ಸಾಕ್ಷಿಯಾಗಿದ್ದು  ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ. ಉಭಯ ರಾಷ್ಟ್ರದ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಈ ಮುಖಾಮುಖಿಯಾಗಿದೆ. 

ನರೆಂದ್ರ ಮೋದಿಯವರೆ ಮುಂದಾಗಿ ಮಾತಿಗೆ ಇಳಿದರೂ ಪಾಕಿಸ್ತಾನದ ಅಧ್ಯಕ್ಷರು ತಕ್ಕ ಸ್ಪಂದನೆ ನೀಡಿಲ್ಲ.  ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಎರಡು ರಾಷ್ಟ್ರದ ನಾಯಕರು ಭೇಟಿಯಾದರು. ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಗಡಿಯಲ್ಲಿ ಒಂದೆಲ್ಲಾ ಒಂದು ಕ್ಯಾತೆ ತೆಗೆಯುತ್ತಲೇ ಇದೆ. ಇಂಥ ಸಂದರ್ಭದಲ್ಲಿ ಉಭಯ ನಾಯಕರು ಎದುರು-ಬದರಾಗಿದ್ದಾರೆ.

ಕಳೆದ 2016ರಲ್ಲಿ ಭಾರತದ ಮಿಲಿಟರಿ ಕ್ಯಾಂಪ್‌ನ ಮೇಲೆ ಮಾಡಿದ್ದ ದಾಳಿ, ಕುಲಭೂಷಣ್ ಜಾಧವ್ ಪ್ರಕರಣಗಳು ಮೊದಲೆ ಸರಿ ಇಲ್ಲದ ಭಾರತ-ಪಾಕ್  ಸಂಬಂಧವನ್ನು ಮತ್ತಷ್ಟು ಹಳಸುವಂತೆ ಮಾಡಿತ್ತು. ಕಳೆದ ವರ್ಷ ಇಸ್ಲಾಮಬಾದ್ ನಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗ ಸಭೆಯನ್ನು ಭಾರತ ಬಹಿಷ್ಕರಿಸಿತ್ತು.  ಉಗ್ರವಾದಕ್ಕೆ ಪಾಕಿಸ್ತಾನ ನಿರಂತರವಾಗಿ ನೆರವು ನೀಡುತ್ತ ಬರುತ್ತಿದೆ ಎಂದು ಭಾರತ ಆರೋಪ ಮಾಡಿತ್ತು.

ಶೃಂಗಸಭೆಯಲ್ಲಿ ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ಮೋದಿ ಮಾತುಕತೆ ನಡೆಸಿದರು. ಆದರೆ ಭಾರತ ಮತ್ತು ಪಾಕಿಸ್ತಾನದ ನಾಯಕರ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಯಲಿಲ್ಲ. ಶನಿವಾರವೇ ಕ್ವಿಂಗ್ಡಾವೊಗೆ ಆಗಮಿಸಿದ್ದ ಪ್ರಧಾನಿ ನರೇಂದ್ರಮೋದಿ  ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹಾಗೂ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ , ಮತ್ತು ಅಪ್ಘಾನಿಸ್ತಾನ ಅಧ್ಯಕ್ಷ ಅಶ್ರಪ್ ಗನಿ  ಮುಂತಾದ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. 

Follow Us:
Download App:
  • android
  • ios