ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ನೋಟು ನಿಷೇಧದಿಂದ ಸಾಮಾನ್ಯ ಜನತೆಗೆ ತೊಡಕಾಗಿದೆ ಹಾಗೂ ದೇಶದಲ್ಲಿ ಆರ್ಥಿಕ ನಿರ್ಬಂಧ ಉಂಟಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು (ನ.28): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಆಕ್ರೋಶ ದಿನವನ್ನು ಆಚರಿಸಿದ್ದಾರೆ.
ಬೆಂಗಳೂರಿನ ಟೌನ್ಹಾಲ್ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ನೋಟು ನಿಷೇಧದಿಂದ ಸಾಮಾನ್ಯ ಜನತೆಗೆ ತೊಡಕಾಗಿದೆ ಹಾಗೂ ದೇಶದಲ್ಲಿ ಆರ್ಥಿಕ ನಿರ್ಬಂಧ ಉಂಟಾಗಿದೆ ಎಂದು ಹೇಳಿದ್ದಾರೆ.
ಜನ ಸಾಮಾನ್ಯರು ಕೆಲಸ ಬಿಟ್ಟು ಕ್ಯೂ ನಿಂತಿದ್ದಾರೆ, ಹಾಗೂ ಬಡಜನರು, ಕಾರ್ಮಿಕರು, ಉದ್ದಿಮೆದಾರರಿಗೆ ನಷ್ಟವಾಗಿದೆ. ಆದರೆ ಪ್ರಧಾನಿ ಮೋದಿ ಜನರನ್ನು ದಿಕ್ಕು ತಪ್ಪಿಸ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ನೂರು ದಿನದಲ್ಲಿ ವಿದೇಶದಲ್ಲಿರುವ ಕಪ್ಪಹಣ ತರುತ್ತೇವೆ ಎಂದಿದ್ದ ಮೋದಿ, ಎರಡೂವರೆ ವರ್ಷವಾದ್ರೂ ಕಪ್ಪು ಹಣ ತರಲಿಲ್ಲ, ಅದರ ಬದಲು ಜನರಿಗೆ ಕಷ್ಟ ಕೊಟ್ಟಿದ್ದಾರೆ ಎಂದು ಗುಂಡುರಾವ್ ಹೇಳಿದ್ದಾರೆ.