ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಲ್ಲಿನ ಕಾಂಡ್ಲಾ ಪೋರ್ಟ್ ಟ್ರಸ್ಟಿನ 6 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಸುಮಾರು 993 ಕೋಟಿ ಮೌಲ್ಯದ ಯೋಜನೆ ಇದಾಗಿದೆ.

ಗುಜರಾತ್ (ಮೇ.22): ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಲ್ಲಿನ ಕಾಂಡ್ಲಾ ಪೋರ್ಟ್ ಟ್ರಸ್ಟಿನ 6 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಸುಮಾರು 993 ಕೋಟಿ ಮೌಲ್ಯದ ಯೋಜನೆ ಇದಾಗಿದೆ.

ಬಚೂ ನಗರದಲ್ಲಿರುವ ನರ್ಮದಾ ನದಿ ಯೋಜನೆಯ ಕಾಲುವೆಯಲ್ಲಿ ಪಂಪಿಂಗ್ ಸ್ಟೇಷನ್ನನ್ನು ಉದ್ಘಾಟಿಸಿದರು. ಇದನ್ನು ರೂ.148 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದು 18 ಮೀಟರ್ ಎತ್ತರದವರೆಗೆ ನೀರನ್ನು ಎತ್ತಲಿದ್ದು ಈ ನೀರು ಅಂಜಾರ್ ಹಾಗೂ ಮಾಂಡ್ವಿ ನದಿ ಕಡೆ ಹರಿಯಲಿದೆ. ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ಕಚ್ ಗೆ ಇದು 2 ನೇ ಭೇಟಿಯಾಗಿದೆ.

ಕಡಲುಗಳ ನಗರಿ ಎಂದೇ ಗುಜರಾತ್ ಖ್ಯಾತವಾಗಿದೆ. ಇಂದಿಗೂ ತನ್ನ ಕಡಲತೀರದ ವೈಶಿಷ್ಟ್ಯವನ್ನು ಮುಂದುವರೆಸಿಕೊಂಡು ಬಂದಿದೆ. ಈ ಕಚ್ ಭೂಮಿಯಲ್ಲಿ, ಇಲ್ಲಿನ ಜನರಲ್ಲಿ ವಿಶೇಷವಿದೆ. ಒಳ್ಳೆಯ ಬಂದರು ಭಾರತದ ಪ್ರಗತಿಗೆ ಅಗತ್ಯವೆಂದು ಮೋದಿ ಇಲ್ಲಿನ ಜನರನ್ನುದ್ದೇಶಿಸಿ ಹೇಳಿದ್ದಾರೆ.

ಮೂಲಭೂತ ಸೌಕರ್ಯ, ದಕ್ಷತೆ ಹಾಗೂ ಪಾರದರ್ಶಕತೆ ದೇಶದ ಆರ್ಥಿಕ ಪ್ರಗತಿಯ ಆಧಾರಸ್ತಂಭವಾಗಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಏಷ್ಯಾದ ಅತ್ಯುತ್ತಮ ಬಂದರಲ್ಲಿ ಕಾಂಡ್ಲಾ ಕೂಡಾ ಒಂದಾಗಲಿದೆ ಎಂದು ಹೇಳಿದರು.