ಸಿಕ್ಕಿಂ ನ ಮೊದಲ ವಿಮಾನ ನಿಲ್ದಾಣ ಉದ್ಘಾಟನೆ! ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ! ಈಶಾನ್ಯ ಭಾರತದ ಅಭಿವೃದ್ಧಿಯ ಕೀಲಿ ಕೈ ಎಂದ ಮೋದಿ! ಚೀನಾ ಗಡಿಯಿಂದ ಕೇವಲ 60 ಕಿ.ಮೀ. ದೂರದಲ್ಲಿದೆ ಪಕ್ಯೊಂಗ್ ವಿಮಾನ ನಿಲ್ದಾಣ
ಸಿಕ್ಕಿಂ(ಸೆ.24): ಪ್ರಧಾನಿ ನರೇಂದ್ರ ಮೋದಿ ಇಂದು ಗ್ಯಾಂಗ್ಟೋಕ್ ನಲ್ಲಿ ಪಕ್ಯೊಂಗ್ ನ್ಯೂ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಉದ್ಘಾಟಿಸಿದರು.
ಸಿಕ್ಕಿಂನಿಂದ 30 ಕಿಮೀ ದೂರದಲ್ಲಿ ಈ ವಿಮಾನ ನಿಲ್ದಾಣವಿದ್ದು, 605.59 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ರಾಜ್ಯಕ್ಕೆ ಯಾವುದೇ ರೈಲು ಸಂಪರ್ಕವಿಲ್ಲ, ಪಶ್ಚಿಮ ಬಂಗಾಳದ ಬಾಗ್ದೋದ್ರಾ ವಿಮಾನ ನಿಲ್ದಾಣ ಸಿಕ್ಕಿಂ ನಿಂದ 125 ಕಿಮೀ ದೂರದಲ್ಲಿದೆ.
ಅಕ್ಟೋಬರ್ 4 ರಿಂದ ಕಮರ್ಷಿಯಲ್ ವಿಮಾನಗಳು ಹಾರಾಟ ನಡೆಸುತ್ತವೆ. ಸ್ಪೈಸ್ ಜೆಟ್ ವಿಮಾನ ನಿಲ್ದಾಣಗಳು ಕೊಲ್ಕೊತಾ ಸಿಕ್ಕಿಂ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಪ್ರಧಾನಿ ನವರೇಂದ್ರ ಮೋದಿ 2ನೇ ಬಾರಿಗೆ ಸಿಕ್ಕಿಂ ಗೆ ಭೇಟಿ ನೀಡಿದ್ದು, ಈ ವಿಮಾನ ನಿಲ್ದಾಣ ಈಶಾನ್ಯ ರಾಜ್ಯಗಳನ್ನು ಭಾರತದ ಮುಖ್ಯ ಭೂಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕೊಂಡಿ ಎಂದು ಮೋದಿ ಹೇಳಿದ್ದಾರೆ.
ಸಿಕ್ಕಿಂನ ಎತ್ತರದ ಪರ್ವತ ಪ್ರದೇಶದಲ್ಲಿ ನಿರ್ಮಿಸಲಾದ ಗ್ರೀನ್ಫೀಲ್ಡ್ ಏರ್ಪೋರ್ಟ್, ಗ್ಯಾಂಗ್ಟಾಕ್ ಇತ್ತೀಚೆಗೆ ಸಿವಿಲ್ ಏವಿಯೇಷನ್ ಇಲಾಖೆಯ ವಾಣಿಜ್ಯ ಹಾರಾಟದ ಆಯೋಗದಿಂದ ಅನುಮತಿ ಪಡೆದುಕೊಂಡಿದೆ.
ಚೀನಾ ಗಡಿಯಿಂದ ಕೇವಲ 60 ಕಿ.ಮೀ. ದೂರದಲ್ಲಿರುವ ಈ ವಿಮಾನ ನಿಲ್ದಾಣ ದೇಶದಲ್ಲಿ 100 ನೇ ವರ್ಕಿಂಗ್ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
