ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ನಮೋ ಕೆಲಸ ಆರಂಭ| ರಾತ್ರಿಯೇ ಪ್ರಧಾನಿ ಮೋದಿ ಮಹತ್ವದ ಮಾತುಕತೆ

ನವದೆಹಲಿ[ಮೇ.31]: ಪರಿಶ್ರಮಕ್ಕೆ ಹೆಸರಾಗಿರುವ ನರೇಂದ್ರ ಮೋದಿ, 2ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಧಿಕೃತ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.

ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಇದರಲ್ಲಿ, ಕಾರ್ಯಕ್ರಮಕ್ಕೆ ಬಂದಿದ್ದ ಬಿಮ್‌ಸ್ಟೆಕ್‌ ದೇಶಗಳ ಗಣ್ಯರು ಭಾಗಿಯಾಗಿದ್ದರು.

Scroll to load tweet…

ಇದಾದ ಬೆನ್ನಲ್ಲೇ ಮೋದಿ ಅವರು ಕಿರ್ಗಿಸ್ಥಾನದ ರಾಷ್ಟ್ರಪತಿ ಜೀನ್‌ಬೆಕೋವ್‌ ಅವರೊಂದಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಏನಿದು ಬಿಮ್‌ಸ್ಟೆಕ್(BIMSTEC):

’ದ ಬೆ ಆಫ್ ಬೆಂಗಾಲ್ ಇನಿಶಿಯೇಟಿವ್ ಫಾರ್ ಮಲ್ಟಿಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್ ಇಕಾನಮಿಕ್ ಕೋ-ಆಪರೇಷನ್[ಬಹುಕ್ಷೇತ್ರ ತಾಂತ್ರಿಕ ಹಾಗೂ ಆರ್ಥಿಕ ಸಹಕಾರಕ್ಕಾಗಿ ಬಂಗಾಳ ತೀರ ಸುಧಾರಣಾ ಶೃಂಗಸಭೆ]’. ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ನಡುವೆ ಸಂಪರ್ಕ ಏರ್ಪಡಿಸುವ ನಿಟ್ಟಿನಲ್ಲಿ 7 ರಾಷ್ಟ್ರಗಳನ್ನೊಳಗೊಂಡ [ಬಾಂಗ್ಲಾದೇಶ, ಭೂತಾನ್, ಭಾರತ, ಮಯನ್ಮಾರ್, ನೇಪಾಳ, ಶ್ರೀಲಂಕಾ ಹಾಗೂ ಥಾಯ್ಲೆಂಡ್] ಅಂತರಾಷ್ಟ್ರೀಯ ಸಂಘಟನೆ.