500 ಹಾಗೂ 1000 ಮುಖಬೆಲೆಯ ನೋಟಿನ ರದ್ದಿನಿಂದ ಕಪ್ಪುಹಣ ಹೊರಬರುತ್ತದೆ ಎಂದು ಪ್ರಧಾನಿ ಮೋದಿ ಹೇಳಿ ಜನರನ್ನು ಸಮಾಧಾನಪಡಿಸುವಂತ ಮಾತನಾಡುತ್ತಿದ್ದರೆ ಇಲ್ಲಿ ಮಗಳ ಮದುವೆಯನ್ನು ಹೇಗೆ ಮಾಡುವುದು ಎಂದು ತಂದೆ ತಾಯಿ ಕಂಗಾಲಾಗಿದ್ದಾರೆ.
ಚೆನ್ನೈ (ನ.10): 500 ಹಾಗೂ 1000 ಮುಖಬೆಲೆಯ ನೋಟಿನ ರದ್ದಿನಿಂದ ಕಪ್ಪುಹಣ ಹೊರಬರುತ್ತದೆ ಎಂದು ಪ್ರಧಾನಿ ಮೋದಿ ಹೇಳಿ ಜನರನ್ನು ಸಮಾಧಾನಪಡಿಸುವಂತ ಮಾತನಾಡುತ್ತಿದ್ದರೆ ಇಲ್ಲಿ ಮಗಳ ಮದುವೆಯನ್ನು ಹೇಗೆ ಮಾಡುವುದು ಎಂದು ತಂದೆ ತಾಯಿ ಕಂಗಾಲಾಗಿದ್ದಾರೆ.
ಇಲ್ಲಿನ ನಿವಾಸಿಯೊಬ್ಬರ ಮಗಳ ಮದುವೆ ನಾಳೆ ನಡೆಯಬೇಕಿದ್ದು ಸಂಜೆ ಆರತಕ್ಷತೆ ನಡೆಯಲಿದೆ. ಬ್ಯಾಂಕಿಗೆ ಹೋಗಿ ಹೆಚ್ಚಿನ ಮೊತ್ತದ ಹಣ ಕೇಳಿದರೆ 4 ಸಾವಿರಕ್ಕಿಂತ ಜಾಸ್ತಿ ಕೊಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದಾರೆ.
ಮದುವೆ ಆಮಂತ್ರಣ ಪತ್ರಿಕೆ ತೋರಿಸಿ ಪರಿಪರಿಯಾಗಿ ಕೇಳಿಕೊಂಡರೂ ಹೆಚ್ಚಿನ ಹಣ ನೀಡಲು ಒಪ್ಪಲಿಲ್ಲ. ಇದು ಕುಟುಂಬದವರನ್ನು ಚಿಂತೆಗೀಡು ಮಾಡಿದೆ. ಸ್ನೇಹಿತರು ಹಾಗೂ ಸಂಬಂಧಿಕರು ಸಹಾಯಕ್ಕೆ ಮುಂದಾಗಿದ್ದಾರೆ.
