ನೋಟು ನಿಷೇಧವನ್ನು ಭಯೋತ್ಪಾದನೆ, ಭ್ರಷ್ಟಾಚಾರ ತಡೆಗೆ ನಡೆಸುತ್ತಿರುವ ಯಜ್ಞ ಎಂದು ಬಣ್ಣಿಸಿರುವ ಮೋದಿ, ಸರ್ಕಾರದ ಕ್ರಮದಿಂದ ರೈತರು, ವ್ಯಾಪಾರಿಗಳು, ಕಾರ್ಮಿಕರು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ನವದೆಹಲಿ (ಡಿ.08): ನೋಟು ನಿಷೇಧಕ್ಕೆ ಒಂದು ತಿಂಗಳು ಪೂರ್ಣಗೊಂಡ ಸಂದರ್ಭದಲ್ಲಿ, ಸರ್ಕಾರದ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ.
ಕಪ್ಪುಹಣದ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡೋಣವೆಂದು ಟ್ವಿಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ನೋಟು ನಿಷೇಧವನ್ನು, ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ತಡೆಗೆ ನಡೆಸುತ್ತಿರುವ ಯಜ್ಞ ಎಂದು ಬಣ್ಣಿಸಿರುವ ಮೋದಿ, ಸರ್ಕಾರದ ಕ್ರಮದಿಂದ ರೈತರು, ವ್ಯಾಪಾರಿಗಳು, ಕಾರ್ಮಿಕರು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಆ ಐತಿಹಾಸಿಕ ಹೆಜ್ಜೆಯಲ್ಲಿ ನಾವೆಲ್ಲರೂ ಗೆದ್ದು ತೋರಿಸೋಣ, ಇದರಿಂದ ಹಳ್ಳಿಗಳ ಸ್ವರೂಪವೂ ಬದಲಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಈ ಕ್ರಮದಿಂದ ತೊಂದರೆಯಾಗಲಿದೆ ಎಂಬುವುದನ್ನು ಮೊದಲೇ ಹೇಳಿದ್ದೆ. ಅದು ತಾತ್ಕಲಿಕ ಮಾತ್ರ. ಕಷ್ಟಗಳ ನಡುವೆಯೂ ಸಹಕರಿಸಿದ್ದೀರಿ ಎಂದು ದೇಶದ ಜನತೆಗೆ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.
