ಬಾಬಾ ಜೈ ಗುರು ದೇವ್ ಅವರ ಮೆರವಣಿಗೆಯಲ್ಲಿ ಕಾಲ್ತುಳಿದಲ್ಲಿ ಮೃತಪಟ್ಟವರಿಗೆ ಪ್ರದಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ
ನವದೆಹಲಿ (ಅ.15): ಬಾಬಾ ಜೈ ಗುರು ದೇವ್ ಅವರ ಮೆರವಣಿಗೆಯಲ್ಲಿ ಕಾಲ್ತುಳಿದಲ್ಲಿ ಮೃತಪಟ್ಟವರಿಗೆ ಪ್ರದಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ವಾರಣಾಸಿಯಲ ಗಂಗಾ ನದಿ ತಟದ ರಾಮನಗರದ ಬಳಿ ಬಾಬಾ ಜೈಗುರುದೇವ್ ಅವರ ಭಕ್ತರು ನಡೆಸುತ್ತಿದ್ದ ಮೆರವಣಿಗೆಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ 19ಕ್ಕೂ ಹೆಚ್ಚು ಮಂದಿ ಸತ್ತಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ.
ಕಾಲ್ತುಳಿತದಲ್ಲಿ ಸಿಲುಕಿದವರಿಗೆ ಸಹಾಯ ಒದಗಿಸಲು ನಾನು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಈ ಘಟನೆಯಿಂದಾಗಿ ಬಹಳ ಬೇಸರವಾಗಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಗುಣಮುಖರಾಗಲು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ
