ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

First Published 4, Feb 2018, 4:56 PM IST
PM Modi begins speech in Kannada
Highlights

ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಆರಂಭಿಸಿದ್ದು, ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು.

ಬೆಂಗಳೂರು: ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಆರಂಭಿಸಿದ್ದು, ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು.

'ಕರ್ನಾಟಕದ ನನ್ನ ಪ್ರೀತಿಯ ಬಂಧು ಭಗಿನಿಯರಿಗೆ ನನ್ನ ನಮಸ್ಕಾರಗಳು..' ಎಂದು ಮೋದಿ ಭಾಷಣ ಆರಂಭಿಸುತ್ತಿದ್ದಂತೆ, ಕರತಾಡನ ಮುಗಿಲು ಮುಟ್ಟಿತು.

'ನಾಡ ಪ್ರಭು ಕೆಂಪೇಗೌಡ, ಮಹಾತ್ಮ ಬಸವೇಶ್ವರ, ಮಾದಾರ ಚೆನ್ನಯ್ಯ, ವೀರ ರಾಣಿ ಕಿತ್ತೂರು ಚೆನ್ನಮ್ಮ, ಶಿಶುನಾಳ ಶರೀಫ್, ಸಂಗೊಳ್ಳಿ ರಾಯಣ್ಣ, ಸರ್. ಎಂ.ವಿಶ್ವೇಶ್ವರಯ್ಯ...ಮುಂತಾದ ಮಹಾಪುರುಷರನ್ನು ಹೆತ್ತ ಕರ್ನಾಟಕ...' ಎಂಬುದನ್ನೂ ಕನ್ನಡದಲ್ಲಿಯೇ ಹೇಳಿ, 'ನವ ಕರ್ನಾಟಕವನ್ನು ನಿರ್ಮಿಸಲು ಬಿಜೆಪಿ ಗೆಲ್ಲಿಸಿ....' ಎಂದು ಕರೆ ನೀಡಿದರು.
 

loader