ಫೋರ್ಬ್ಸ್ ವಿಶ್ವದ ಟಾಪ್ 10 ಬಲಾಢ್ಯರಲ್ಲಿ ಮೋದಿ

First Published 10, May 2018, 10:54 AM IST
PM Modi 9th on Forbes most powerful list
Highlights

ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡುವ ವಿಶ್ವದ ಅತಿ ಬಲಿಷ್ಠ ಟಾಪ್-10 ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದಿದ್ದಾರೆ. ಚೀನಾ ಅಧ್ಯಕ್ಷ ಕ್ಲಿ ಜಿನ್‌ಪಿಂಗ್ ನಂ.1, ರಷ್ಯಾ ಅಧ್ಯಕ್ಷ ಪುಟಿನ್ ನಂ.2, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂ.3. ಟಾಪ್-100ರಲ್ಲಿ ಮುಖೇಶ್ ಅಂಬಾನಿ, ನಾದೆಳ್ಳಾಗೂ ಸ್ಥಾನ.
 

ನ್ಯೂಯಾರ್ಕ್: ಫೋರ್ಬ್ಸ್ ನಿಯತಕಾಲಿಕೆ  ಬಿಡುಗಡೆ ಮಾಡುವ ವಿಶ್ವದ ಅತಿ ಬಲಿಷ್ಠ ಟಾಪ್-10 ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದಿದ್ದಾರೆ. 

ಇದೇ ವೇಳೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರಥಮ ಸ್ಥಾನ ಪಡೆದಿದ್ದು, ರಷ್ಯಾ ಅಧ್ಯಕ್ಷ  ವ್ಲಾದಿಮಿರ್ ಪುಟಿನ್ ಅವರನ್ನು ‘ಪದಚ್ಯುತಿ’ ಗೊಳಿಸಿ, 2ನೇ ಸ್ಥಾನಕ್ಕೆ ತಳ್ಳಿದ್ದಾರೆ. ಟಾಪ್ 75 ರ ಪಟ್ಟಿಯಲ್ಲಿ ಮೋದಿ 9 ನೇ ಸ್ಥಾನ ಪಡೆದಿದ್ದಾರೆ. 

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ 13, ಬ್ರಿಟನ್ ಪ್ರಧಾನಿ ತೆರೇಸಾ ಮೇ 14, ಚೀನಾ ಪ್ರಧಾನಿ ಲೀ ಕೆಖಿಯಾಂಗ್ 15, ಆ್ಯಪಲ್ ಸಿಇಒ ಟಿಮ್ ಕುಕ್ 24 ನೇ ಸ್ಥಾನ ಗಳಿಸಿದ್ದಾರೆ. 

ಉದ್ಯಮಿ ಮುಕೇಶ್ ಅಂಬಾನಿ 32ನೇ ಸ್ಥಾನ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ 40 ನೇ ಸ್ಥಾನ ಪಡೆದಿರುವುದು ವಿಶೇಷ. ‘500 ರು. ಹಾಗೂ 1000 ರು. ನೋಟು ನಿಷೇಧ ಮೋದಿ ಅವರ ದಿಟ್ಟ ಕ್ರಮಗಳಲ್ಲಿ ಒಂದು’ ಎಂದು ಫೋರ್ಬ್ಸ್ ಕೊಂಡಾಡಿದೆ. 

loader