ಈ ಮಾಹಿತಿ ಗೊತ್ತಾದ ತಕ್ಷಣ ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ಕಾರ್ಯ ಪ್ರವೃತ್ತವಾಯಿತು. ಈ ವಿಷ ಹಾಲು ಮಾಫಿಯಾದೊಳಗಿದ್ದು, ಅಲ್ಲಿನ ಅನಾಚಾರಗಳನ್ನ ನೋಡಲಾಗದೆ ದಂಧೆ ಬಿಟ್ಟು ಹೊರಬಂದವರನ್ನ ಪತ್ತೆ ಹಚ್ಚಿ ಪ್ಲಾಸ್ಟಿಕ್ ಹಾಲಿನ ಸೀಕ್ರೆಟ್ಸ್ ಪಡೆದುಕೊಂಡೆವು.
ಭೀಕರ ಬರ ಕರುನಾಡನ್ನ ಕಂಗಾಲಾಗಿಸಿದ್ರೆ, ವಿಷ ಹಾಲು ಮಾಫಿಯಾದವರಿಗೆ ಮಾತ್ರ ವರವಾಗಿದೆ. ಈ ಮಾಫಿಯಾ ನಮ್ಮ ರಾಜ್ಯದೊಳಗೆ ಪ್ಲಾಸ್ಟಿಕ್ ಹಾಲು ಉತ್ಪಾದಿಸಿ ಜನರಿಗೆ ವಿಷ ಕುಡಿಸುತ್ತಿದೆ. ಈ ಆಘಾತಕಾರಿ ಸುದ್ದಿ ಗೊತ್ತಾದ ತಕ್ಷಣ ಅದರ ಬೆನ್ನತ್ತಿನ ಕವರ್ಸ್ಟೋರಿ ತಂಡ ಪ್ಲಾಸ್ಟಿಕ್ ಹಾಲಿನ ಗುಟ್ಟು ರಟ್ಟು ಮಾಡಿದೆ.
ಬರದ ಬೇಗೆಯ ಲಾಭ ಪಡೆಯಲು ರಾಜ್ಯದಲ್ಲಿ ತಲೆ ಎತ್ತಿದೆ ವಿಷ ಹಾಲು ಮಾಫಿಯಾ. ಹಾಲಿನ ಕೊರತೆಯನ್ನೇ ಬಂಡವಾಳ ಮಾಡಿಕೊಂಡು ತಯಾರಿಸುತ್ತಿದೆ ಪ್ಲಾಸ್ಟಿಕ್ ಹಾಲು.
ಈ ಮಾಹಿತಿ ಗೊತ್ತಾದ ತಕ್ಷಣ ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ಕಾರ್ಯ ಪ್ರವೃತ್ತವಾಯಿತು. ಈ ವಿಷ ಹಾಲು ಮಾಫಿಯಾದೊಳಗಿದ್ದು, ಅಲ್ಲಿನ ಅನಾಚಾರಗಳನ್ನ ನೋಡಲಾಗದೆ ದಂಧೆ ಬಿಟ್ಟು ಹೊರಬಂದವರನ್ನ ಪತ್ತೆ ಹಚ್ಚಿ ಪ್ಲಾಸ್ಟಿಕ್ ಹಾಲಿನ ಸೀಕ್ರೆಟ್ಸ್ ಪಡೆದುಕೊಂಡೆವು.
ಈ ಪ್ಲಾಸ್ಟಿಕ್ ಹಾಲಿಗೆ ಬಳಸೋ ವಸ್ತು ಯಾವುದು ಗೊತ್ತಾ? ಫೈಬರ್ ತಟ್ಟೆ, ಪಾತ್ರೆಗಳನ್ನು ತಯಾರಿಸಲು ಬಳಸೋ ಪೌಡರ್. ಇದನ್ನ ಮೆಲಮೈನ್ ಅಂತಲೂ ಕರೀತಾರೆ.
ಅಷ್ಟೇ ಅಲ್ಲದೆ ಗಮ್, ಪ್ರಾಣಿಗಳ ಚರ್ಮ, ಕೂದಲಿನಿಂದ ತೆಗೆದ ಪ್ರೊಟೀನ್, ಕೃತಕ ಸುವಾಸನೆಗೆ ಪೌಡರ್, ವನಸ್ಪತಿ ಬಳಸಿ ಈ ವಿಷ ಹಾಲು ತಯಾರಿಸುತ್ತಿದ್ದಾರೆ. ಈ ಹಾಲಿನ್ನಲ್ಲಿ ಟೀ/ಕಾಫಿ ಮಾಡಿ ಪರೀಕ್ಷಿಸಿದರೆ ನಿಜ ಹಾಲಿಗೂ ಇದಕ್ಕೂ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಇನ್ನೊಂದು ಆತಂಕಕಾರಿ ವಿಚಾರ ಏನು ಅಂದರೆ ಇದನ್ನ ಸಾಮಾನ್ಯ ಪರೀಕ್ಷೆಗಳಲ್ಲಿ ಪತ್ತೆ ಹಚ್ಚುವುದು ಭಾರೀ ಕಷ್ಟ.
ಮಕ್ಕಳ ಕಿಡ್ನಿ, ಲಿವರನ್ನ ತಕ್ಷಣ ಹಾಳು ಮಾಡುವ, ಜನರಿಗೆ ಕ್ಯಾನ್ಸರ್, ಡಯಾಬಿಟೀಸ್, ಹೃದ್ರೋಗ ತರೋ ಹಾಲಿನ ಕಲಬೆರಕೆ ಪತ್ತೆಹಚ್ಚುವ ಸುಸಜ್ಜಿತ ಪ್ರಯೋಗಾಲಯವೇ ರಾಜ್ಯದಲ್ಲಿಲ್ಲ. ಇದು ವಿಷ ಹಾಲಿನ ದಂಧೆಕೋರರಿಗೆ ವರದಾನವಾಗಿದೆ. ಇದು ನಮ್ಮ ದುರಂತವೇ ಸರಿ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ಹಾಲಿನ ಮಾಫಿಯಾವನ್ನು ಸಂಪೂರ್ಣವಾಗಿ ತಡೆಗಟ್ಟಬೇಕಿದೆ.
ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
