ಮನೆಗಳ ಮುಂದೆ ಸಸಿ ನೆಡುವುದನ್ನು ಬಿಬಿಎಂಪಿ ಕಡ್ಡಾಯ ಮಾಡುತ್ತಿದೆ. ಸಸಿ ನಡೆದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯಕ್ತ ಮಂಜುನಾಥ್​ ಪ್ರಸಾದ್ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮನೆಮುಂದೆ ಸಸಿ ನೆಡಲು ಬಿಬಿಎಂಪಿಯಿಂದ ಉಚಿತ ಸಸಿ ಕೂಡ ಸಿಗುತ್ತದಂತೆ.

ಬೆಂಗಳೂರು(ಜೂನ್ 07): ಇನ್ಮೇಲೆ ಬೆಂಗಳೂರಿನಲ್ಲಿ ಮನೆಗಳನ್ನ ಕಟ್ಟುವ ಮುಂಚೆ ಎರಡು ಸಸಿಗಳಿಗೆ ಸ್ಥಳ ಬಿಟ್ಟು ಮನೆ ಕಟ್ಟಬೇಕಾಗುತ್ತದೆ. ಸಿಲಿಕಾನ್ ಸಿಟಿಯಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬೆನ್ನಲ್ಲೆ ಬಿಬಿಎಂಪಿ ಮಹತ್ವದ ಕಾಯ್ದೆಯೊಂದನ್ನ ಜಾರಿಗೆ ತರುತ್ತಿದೆ. ಮನೆ ಕಟ್ಟುವಾಗ ಕನಿಷ್ಠ 2 ಸಸಿಯನ್ನಾದರೂ ನೆಡಲೇಬೇಕು ಎಂಬ ಕಾನೂನಿದೆ. ಒಂದು ವೇಳೆ ಎರಡು ಸಸಿಗಳ ನೆಡದಿದ್ರೆ, ಬಿಬಿಎಂಪಿ ಅಧಿಕಾರಿಗಳು ದಂಡ ಹಾಕುತ್ತಾರಂತೆ. ಇಂಥದ್ದೊಂದು ಕಾಯ್ದೆ ಬಿಬಿಎಂಪಿ ಗೃಹ ನಿರ್ಮಾಣ ಕಾಯ್ದೆಯಲ್ಲಿ ಮೊದಲಿಂದಲ್ಲೂ ಇದೆ. ಯಾರೇ ಮನೆ ಕಟ್ಟಿದ್ರು, ಮಳೆ ನೀರು ಹರಿದು ಹೋಗೋದಕ್ಕೆ ಸೂಕ್ತ ವ್ಯವಸ್ಥೆ ಇರಬೇಕು. ಜೊತೆಗೆ ಎರಡು ಸಸಿಗಳ ನೆಡುವುದು ಕಡ್ಡಾಯವಾಗಿದೆ.. ಆದ್ರೆ ಈ ರೂಲ್ಸ್ ಇತ್ತೀಚೆಗೆ ಯಾರು ಪಾಲಿಸುತ್ತಿಲ್ಲ.. ಹೀಗಾಗಿ ಬಿಬಿಎಂಪಿ ಹೀಗ ದಂಡ ಹಾಕೋಕ್ಕೆ ಮುಂದಾಗುತ್ತಿದೆಯಂತೆ.

ಈ ಬಗ್ಗೆ ಸುವರ್ಣನ್ಯೂಸ್​ ಜೊತೆ ಮಾತನಾಡಿದ ಬಿಬಿಎಂಪಿ ಆಯಕ್ತ ಮಂಜುನಾಥ್​ ಪ್ರಸಾದ್, ಮನೆಗಳ ಮುಂದೆ ಸಸಿ ನೆಡುವುದನ್ನು ಬಿಬಿಎಂಪಿ ಕಡ್ಡಾಯ ಮಾಡುತ್ತಿದೆ. ಸಸಿ ನಡೆದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮನೆಮುಂದೆ ಸಸಿ ನೆಡಲು ಬಿಬಿಎಂಪಿಯಿಂದ ಉಚಿತ ಸಸಿ ಕೂಡ ಸಿಗುತ್ತದಂತೆ.