ಸ್ಯಾಂಡಲ್​ವುಡ್‌ನಲ್ಲಿ ಮತ್ತೊಂದು ಸುಪಾರಿ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ತೆರೆಗೆ ಬಂದ ಯುಗಪುರುಷ ಚಿತ್ರದ ನಾಯಕನ ಕೊಲೆಗೆ ಯತ್ನ ನಡೆದಿದೆ.

ಬೆಂಗಳೂರು: ಸ್ಯಾಂಡಲ್​ವುಡ್‌ನಲ್ಲಿ ಮತ್ತೊಂದು ಸುಪಾರಿ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ತೆರೆಗೆ ಬಂದ ಯುಗಪುರುಷ ಚಿತ್ರದ ನಾಯಕನ ಕೊಲೆಗೆ ಯತ್ನ ನಡೆದಿದೆ. 

ಯುಗಪುರುಷ ನಾಯಕ ನಟನಾದ ಅರ್ಜುನ್ ದೇವ್‌ನನ್ನು ಕೊಲ್ಲಲು ಸುಪಾರಿ ನೀಡಲಾಗಿದೆ, ಎಂದು ದೇವ್ ಪೊಲೀಸರ ಮೊರೆ ಹೋಗಿದ್ದಾರೆ. ಕಾಶೀಫ್ ಎಂಬಾತ ಸುಪಾರಿ ಪಡೆದಿದ್ದಾನೆಂದು ದೂರು ದಾಖಲಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿರುವ ಅರ್ಜುನ್ ದೇವ್, ಕಾಶೀಫ್ ನನ್ನನ್ನು ಕೊಲ್ಲಲು ನನ್ನ ಮನೆ ಮುಂದೆ ಹೊಂಚು ಹಾಕಿ ಹೋಗಿದ್ದಾನೆ. ನನಗೆ ರಕ್ಷಣೆ ಕೊಡಿ ಅಂತಾ ಪೊಲೀಸರ ಮೊರೆ ಹೋಗಿದ್ದಾರೆ. 

ಚಿತ್ರನಟ ನಾಗಿರುವ ದೇವ್, ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಹೌದು. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.