ಪೈಲೆಟ್ ಜಾನ್ ಎಮೆರ್ಸನ್ ಗಗನ ಸಖಿ ಲಾರೆನ್ ಮಿಚೆಲ್ ಗಿಬ್ಸ್'ಗೆ ಮುದ್ದಾಗಿ ಪ್ರೇಮ ನಿವೇದನೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಮಾನಯಾನ ಸಾಕಷ್ಟು ಮಂದಿಗೆ ಸ್ವಲ್ಪ ಬೋರ್ ಎನಿಸೋದು ಸಹಜ. ಆದರೆ ಓಕ್ಲಹೋಮಾ ಸಿಟಿ ವಿಮಾನ ಪ್ರಯಾಣಿಕರಿಗೆ ವಿಮಾನ ಟೇಕ್'ಆಫ್ ಆಗುವುದಕ್ಕೂ ಮುನ್ನ ಒಂದು ಅಚ್ಚರಿ ಕಾದಿತ್ತು. ಪೈಲೆಟ್'ವೊಬ್ಬರು ಗಗನ ಸಖಿಗೆ ಪ್ರಪೋಸ್ ಮಾಡಿದ್ದು ವಿಮಾನದಲ್ಲಿದ್ದ ಹಲವು ಮಂದಿಯ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿತು.

Add Asianetnews Kannada as a Preferred SourcegooglePreferred

ಪೈಲೆಟ್ ಜಾನ್ ಎಮೆರ್ಸನ್ ಗಗನ ಸಖಿ ಲಾರೆನ್ ಮಿಚೆಲ್ ಗಿಬ್ಸ್'ಗೆ ಮುದ್ದಾಗಿ ಪ್ರೇಮ ನಿವೇದನೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಫೇಸ್'ಬುಕ್'ನಲ್ಲಿ ಬರೆದುಕೊಂಡಿರುವ ಗಿಬ್ಸ್, ಕಳೆದ ರಾತ್ರಿ, ವಿಮಾನದಲ್ಲಿರುವ ಪ್ರಯಾಣಿಕರೆದುರೇ ನನ್ನ ಬೆಸ್ಟ್ ಸ್ನೇಹಿತನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡೆ. ಇದು ಕನಸೇನೋ ಎಂದು ಭಾಸವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ 24ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು 1.8 ಲಕ್ಷ ಮಂದಿ ವೀಕ್ಷಿಸಿದ್ದಾರೆ.