ಇಸ್ಲಮಾಬಾದ್[ಜೂ.10]: ಪಾಕಿಸ್ತಾನದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಟಾಯ್ಲೆಟ್‌ಗೆ ಹೋಗುವ ಆತುರದಲ್ಲಿ ತುರ್ತು ನಿರ್ಗಮನ ಬಾಗಿಲನ್ನು ತೆರೆದು ಆತಂಕ ಸೃಷ್ಟಿಸಿದ ಪ್ರಸಂಗ ಜರುಗಿದೆ.

ಶನಿವಾರ ಮ್ಯಾಂಚೆಸ್ಟರ್‌ನಿಂದ ಇಸ್ಲಾಮಾಬಾದ್‌ಗೆ ಬರುತ್ತಿದ್ದ ವಿಮಾನ ರನ್‌ವೇನಲ್ಲಿ ತೆರಳುತ್ತಿದ್ದ ವೇಳೆ ಇಂಥದ್ದೊಂದು ಪ್ರಮಾದ ಆಗಿದೆ. ಮಹಿಳೆ ಟಾಯ್ಲೆಟ್‌ ಬಾಗಿಲು ಎಂದು ತಪ್ಪು ಭಾವಿಸಿ ತುರ್ತು ನಿರ್ಗಮನ ದ್ವಾರದ ಬಟನ್‌ ಒತ್ತಿದ್ದಾಳೆ. ಬಳಿಕ ವಿಮಾನವನ್ನು ನಿಲ್ಲಿಸಲಾಗಿದೆ. ಅಲ್ಲದೇ 40 ಪ್ರಯಾಣಿಕರನ್ನು ವಿಮಾನದಿಂದ ಲಗೇಜ್‌ ಸಹಿತ ಇಳಿಸಿ ತಪಾಸಣೆ ಮಾಡಿದ್ದರಿಂದ ಪ್ರಯಾಣ ಸುಮಾರು 7 ಗಂಟೆಯಷ್ಟು ವಿಳಂಬಗೊಂಡಿದೆ.

ವಿಮಾನ ವಿಳಂಬವಾಗಿದ್ದಕ್ಕೆ ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ನಷ್ಟದಲ್ಲಿರುವ ಪಾಕ್‌ ವಿಮಾನಯಾನ ಸಂಸ್ಥೆಗೆ ಇನ್ನಷ್ಟುಹೊರೆಯನ್ನು ತಂದೊಡ್ಡಿದೆ.