ಬೆಂಗಳೂರು(ಡಿ.12): ಸಿಎಂ ಕುಮಾರಸ್ವಾಮಿಗೆ ಇಂದು ಅಚ್ಚರಿ ಎದುರಾಗಿತ್ತು. ದಶಕಗಳ ಹಿಂದೆ ಸಿಎಂ ಕುಮಾರಸ್ವಾಮಿ ಕೃಪೆಯಿಂದ ಉದ್ಯೋಗ ಪಡೆದುಕೊಂಡ  ವಿಕಲಚೇತನ ಮಹಿಳೆ ಶೀಲಾ ಹಾಗೂ ಸಹೋದ್ಯೋಗಿ ಅಂಧ ಉಮೇಶ್ ಜವಳಿ ಇಂದು ಕುಮಾರಸ್ವಾಮಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ,  ಶೀಲಾ ಹಾಗೂ ಉಮೇಶ್ ಉದ್ಯೋಗಕ್ಕಾಗಿ ಮನವಿ ಮಾಡಿದ್ದರು.  ಇವರ ಮನವಿಗೆ ಸ್ಪಂದಿಸಿದ್ದ ಸಿಎಂ, ವಿಕಲಚೇತನ ಕೋಟಾದಡಿ ವಿಟಿಯುನಲ್ಲಿ ಉದ್ಯೋಗ ಕೊಡಿಸಿದ್ದರು. 

ಇದೀಗ 12 ವರ್ಷಗಳ ಬಳಿಕ ಮತ್ತೆ ಕುಮಾರಸ್ವಾಮಿಯನ್ನ ವಿಟಿಯು ಕ್ಯಾಂಪಸ್ ನಲ್ಲಿ ಭೇಟಿಯಾದ ಶೀಲಾ ಹಾಗೂ ಉಮೇಶ್ ಸಂತಸ ಹಂಚಿಕೊಂಡರು. ಇಷ್ಟೇ ಅಲ್ಲ ಹೊಸ ಬೆಳಕಿಗೆ ಕಾರಣರಾದ ಕುಮಾರಸ್ವಾಮಿಗೆ ಕೃತಜ್ಞತೆ ಸಲ್ಲಿಸಿದರು.