ಸದಾ ಕೋಮು ದಳ್ಳುರಿಯಲ್ಲಿ  ನಲುಗಿ ಹೋಗಿರುವ ಕರಾವಳಿಯಲ್ಲಿ , ಶಾಂತಿ ಸೌಹಾರ್ದತೆ ಎರಡು ವಿಭಿನ್ನ ವಿದ್ಯಮಾನಗಳು ನಡೆದಿವೆ. ದಕ್ಕೆ ಸಾಕ್ಷಿ ಎಂಬಂತೆ ಎರಡು ಫೋಟೋಗಳು ವೈರಲ್ ಆಗಿವೆ.

ಮಂಗಳೂರು(ಸೆ.16): ಸದಾ ಕೋಮು ದಳ್ಳುರಿಯಲ್ಲಿ ನಲುಗಿ ಹೋಗಿರುವ ಕರಾವಳಿಯಲ್ಲಿ , ಶಾಂತಿ ಸೌಹಾರ್ದತೆ ಎರಡು ವಿಭಿನ್ನ ವಿದ್ಯಮಾನಗಳು ನಡೆದಿವೆ. ದಕ್ಕೆ ಸಾಕ್ಷಿ ಎಂಬಂತೆ ಎರಡು ಫೋಟೋಗಳು ವೈರಲ್ ಆಗಿವೆ.

ಅದರಲ್ಲೂ ಪ್ರಖರ ಹಿಂದುತ್ವವಾದಿಯಾಗಿರುವ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಮರ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಹಳೆ ವಿದ್ಯಾರ್ಥಿನಿಯೊಬ್ಬಳ ಮೆಹಂದಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಭಟ್, ಪತ್ನಿ ಸಮೇತರಾಗಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಕಲ್ಲಡ್ಕ ಭಟ್'ಗೆ ಶಾಲೆಯ ಶಿಕ್ಷಕರು ಕೂಡ ಸಾಥ್ ನೀಡಿದ್ದಾರೆ.

ಈ ನಡುವೆ ಇನ್ನೊಂದು ಘಟನೆಯಲ್ಲಿ ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ಕೇಸರಿ ಶಾಲು ಧರಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫೋಟೋಗಳು ಕೂಡ ವೈರಲ್ ಆಗಿದೆ. ಸದ್ಯ ಈ ಎರಡು ವಿದ್ಯಮಾನಗಳು ಸೌಹಾರ್ದತೆಗೆ ಸಾಕ್ಷಿಯಾಗಿದೆ.