ಪಾಂಡವಪುರ  ತಾಲೂಕಿನ ಸುತ್ತಮುತ್ತ 50 ಮತ್ತು 100 ರೂಪಾಯಿ ಜೆರಾಕ್ಸ್ ನೋಟು ಚಲಾವಣೆಯಾಗ್ತಿದೆ. ಅಮಾಯಕರು ಈ ನೋಟು ಪಡೆದುಕೊಂಡು ಬೇಸ್ತು ಬೀಳ್ತಿದ್ದಾರೆ.

ಮಂಡ್ಯ (ಡಿ.04): ಕೇಂದ್ರ ಸರ್ಕಾರ 500 ಮತ್ತು 1000 ನೋಟು ಬ್ಯಾನ್ ಮಾಡಿ 2 ಸಾವಿರ ಹೊಸ ನೋಟು ಹೊರ ತಂದಿದೆ.

ಇದರಿಂದಾಗಿ ಎಲ್ಲೆಡೆ ಚಿಲ್ಲರೆ ಸಮಸ್ಯೆ ತಲೆತೋರಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಕಿಡಿಗೇಡಿಗಳು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಕಲಿ ಮತ್ತು ಜೆರಾಕ್ಸ್’ನ 50 ಮತ್ತು 100 ರೂಪಾಯಿ ನೋಟುಗಳನ್ನು ಚಲಾವಣೆ ಮಾಡ್ತಿದ್ದಾರೆ.

ಇದರಿಂದ ಪಾಂಡವಪುರ ತಾಲೂಕಿನ ಸುತ್ತಮುತ್ತ 50 ಮತ್ತು 100 ರೂಪಾಯಿ ಜೆರಾಕ್ಸ್ ನೋಟು ಚಲಾವಣೆಯಾಗ್ತಿದೆ. ಅಮಾಯಕರು ಈ ನೋಟು ಪಡೆದುಕೊಂಡು ಬೇಸ್ತು ಬೀಳ್ತಿದ್ದಾರೆ.

ಈ ಕೂಡಲೇ ಸಂಬಂಧಪಟ್ಟ ಪೊಲೀಸ್ ಮತ್ತು ಇತರ ಇಲಾಖೆಗಳು ಇತ್ತ ಗಮನ ಹರಿಸಿ ಈ ನಕಲಿ ಮತ್ತು ಜೆರಾಕ್ಸ್ ನೋಟುಗಳ ಹಾವಳಿ ಸಮಸ್ಯೆ ನಿಲ್ಲಿಸುವಂತೆ ಸಾರ್ವಜನಿಕರು ಆಗ್ರಹಿಸ್ತಿದ್ದಾರೆ.

(ಸಾಂದರ್ಭಿಕ ಚಿತ್ರ)