ಚೀನಿಯರ ಆರಾಧ್ಯ ದೇವತೆ ಮೂರ್ತಿಯನ್ನು ವಿಮಾನವೊಂದರ ಬ್ಯುಸಿನೆಸ್ ಕ್ಲಾಸ್’ನಲ್ಲಿ ಮಲೇಷ್ಯಾಗೆ ಕೊಂಡೊಯ್ಯುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಿಂಗಾಪುರ (ಜು.05): ಚೀನಿಯರ ಆರಾಧ್ಯ ದೇವತೆ ಮೂರ್ತಿಯನ್ನು ವಿಮಾನವೊಂದರ ಬ್ಯುಸಿನೆಸ್ ಕ್ಲಾಸ್’ನಲ್ಲಿ ಮಲೇಷ್ಯಾಗೆ ಕೊಂಡೊಯ್ಯುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಚೀನಿಯರ ಸಮುದ್ರ ದೇವತೆ ‘ಮಜು’ವಿನ ಮೂರ್ತಿಯನ್ನು ಐಷಾರಾಮಿ ಆಸನದಲ್ಲಿ ಇಟ್ಟು ಕೊಂಡೊಯ್ಯುತ್ತಿರುವ ದೃಶ್ಯ ವೈರಲ್ ಆಗಿದೆ. 6 ಅಡಿ ಎತ್ತರದ ಮೂರ್ತಿ ಇದಾಗಿದ್ದು ಗಾಢಬಣ್ಣದ ಬಟ್ಟೆಯನ್ನು ಹೊದಿಸಲಾಗಿತ್ತು. ತಲೆಗೆ ಅತಿರಂಜಿತವಾದ ಬಟ್ಟೆಯನ್ನು ಸುತ್ತಲಾಗಿತ್ತು. ಮೂರ್ತಿಯನ್ನು ಇಡುವುದಕ್ಕಾಗಿ ಕೆಲವು ಸೀಟುಗಳನ್ನು ತೆರವುಗೊಳಿಸಿ ಜಾಗವನ್ನು ಹೊಂದಿಸಲಾಗಿತ್ತು.
ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
(ವರದಿ: ಎನ್'ಡಿಟಿವಿ)
