ಬೆಂಗಳೂರು[ಸೆ. 26]  ಹೌಡಿ ಮೋಡಿ ಕಾರ್ಯಕ್ರಮ ಅಮೆಕದ ಹೂಸ್ಟನ್ ಎನ್ ಆರ್ ಜಿ ಸ್ಟೇಡಿಯಂನಲ್ಲಿ ಸೆ. 22 ರಂದು ನಡೆಯುತ್ತಿದ್ದು. 50 ಸಾವಿರಕ್ಕೂ ಅಧಿಕ ಜನ ಸಾಕ್ಷಿಯಾಗಿದ್ದರು. ಆದರೆ ಅದೇ ಕ್ರೀಡಾಂಗಣದ ಹೊರಗೆ ನಡೆದ ಘಟನೆಯೊಂದು ಇದೀಗ ಸುದ್ದಿಯಾಗುತ್ತಿದೆ.

ಪಾಕಿಸ್ತಾನದ ಕಾಶ್ಮೀರ ಅಫೇರ್ಸ್ ಮತ್ತು ಗಿಲೀಟ್ ಬಲಿಸ್ತಾನದ  ಸಚಿವ ಅಲಿ ಅಮೀನ್ ಖಾನ್ ಸಹ ಮೋದಿಯವರ ಈ ಕಾರ್ಯಕ್ರಮದಲ್ಲಿ ಇದ್ದರು. ಆದರೆ ಅವರು ಒಳಗೆ ಇರಲಿಲ್ಲ. ಬದಲಾಗಿ ಹೊರಗೆ ಇದ್ದರು. ಮೋದಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಜತೆ ಇದ್ದರು!

ಮೋದಿ ಸೆಲ್ಫೀ ಕೇಳಿದ ಸಾತ್ವಿಕ್ ಹೆಗಡೆಗೆ ಧೈರ್ಯ ಬಂದಿದ್ದೆಲ್ಲಿಂದ?...

ಅಲಿ ಅಮೀನ್ ಖಾನ್ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಶೇಷ ಕಾರ್ಯದರ್ಶಿ ನೀಮ್ ಉಲ್ ಹಕ್ ಹೊರಗಡೆ ಒಬ್ಬರ ಕೈ ಒಬ್ಬರ ಹಿಡಿದುಕೊಂಡು ನಿಂತಿದ್ದರು.

ಟ್ವೀಟ್ ಒಂದನ್ನು ಮಾಡಿ ಇದಕ್ಕೆ ಶೀರ್ಷಿಕೆ ನೀಡಿ ಎಂದು ಕೇಳಿಕೊಕೊಳ್ಳಲಾಗಿತ್ತು. ಪತ್ರಕರ್ತೆಯೊಬ್ಬರು ಶೇರ್ ಮಾಡಿದ್ದ ಈ ಪೋಟೋಕ್ಕೆ ಬಗೆಬಗೆಯ ಕಮೆಂಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಬರಲು ಆರಂಭಿಸಿದವು.