ಇತ್ತೀಚೆಗೆ ರಸ್ತೆ ಬದಿಯಲ್ಲಿ ಹೃದಯಾಘಾತವಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ, ಜೀವ ಉಳಿಸಿದ ಹೋಮ್ ಗಾರ್ಡ್ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿತ್ತು. ಇದೀಗ ಮತ್ತೊಬ್ಬ ಹೋಂ ಗಾರ್ಡ್, ನಿರ್ಗತಿಕ ವೃದ್ಧೆಗೆ ತುತ್ತು ತಿನಿಸಿದ್ದು, ಇವರ ಹೃದಯವಂತಿಕೆಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
ಹೈದರಾಬಾದ್: ಇತ್ತೀಚೆಗೆ ರಸ್ತೆ ಬದಿಯಲ್ಲಿ ಹೃದಯಾಘಾತವಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ, ಜೀವ ಉಳಿಸಿದ ಹೋಮ್ ಗಾರ್ಡ್ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿತ್ತು. ಇದೀಗ ಮತ್ತೊಬ್ಬ ಹೋಂ ಗಾರ್ಡ್, ನಿರ್ಗತಿಕ ವೃದ್ಧೆಗೆ ತುತ್ತು ತಿನಿಸಿದ್ದು, ಇವರ ಹೃದಯವಂತಿಕೆಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
ಕುಕಟ್ಪಲ್ಲಿ ಸಂಚಾರಿ ಪೊಲೀಸ್ ಠಾಣೆಯ ಹೋಂ ಗಾರ್ಡ್ ಬಿ.ಗೋಪಾಲ್ (35) ಇಂಥದ್ದೊಂದು ಅದ್ಭುತ ಕಾರ್ಯವೆಸಗಿದವರು. ಜವಾಹರ್‌ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದ ರಸ್ತೆ ಬದಿಯಲ್ಲಿದ್ದ ವೃದ್ಧೆಯೊಬ್ಬರು ಊಟವಿಲ್ಲದೇ, ನಿಸ್ತೇಜಗೊಂಡಿದ್ದರು. ಟೀ ಕುಡಿಸಿದ ಗೋಪಾಲ್, ಅವರಿಗೆ ಊಟವನ್ನು ತಂದು ಕೊಟ್ಟರು. ಕೈಯಾರೇ ತಿನ್ನಲೂ ಆಗದ ಈ ಅಜ್ಜಿಗೆ ಇವರೇ ತುತ್ತು ತಿನಿಸಿದರು.
ನಂತರ ಈ ಮಹಿಳೆಯನ್ನು ಸೈಬರಾಬಾದ್ ಪೊಲೀಸರಿಂದ ನೆರವಿನಿಂದ ಆನಂದಶ್ರಾಮಕ್ಕೆ ಸೇರಿಸಲಾಗಿದೆ.
ತೆಲಂಗಾಣ ಡಿಜಿಪಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಷ ಭಾರ್ಗವಿ ಈ ಬಗ್ಗೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು, ಅಪಾರ ಶ್ಲಾಘನೆ ವ್ಯಕ್ತವಾಗಿದೆ.
