Asianet Suvarna News Asianet Suvarna News

ವಿದೇಶಿ ಅಂಚೆ ಚೀಟಿಯಲ್ಲೂ ಗಾಂಧಿ ವಿರಾಜಮಾನ!

ಕಲಬುರ್ಗಿಯಲ್ಲೊಬ್ಬ ಗಾಂಧಿ ಅನುಯಾಯಿಯಿದ್ದಾರೆ. ಮಹಾತ್ಮಾ ಗಾಂಧೀಜಿ ಕುರಿತು ಹೊರಬರುವ ಅಂಚೆ ಚೀಟಿಗಳ ಸಂಗ್ರಹ ಇವರ ಬಳಿಯಿದೆ. ದೇಶ, ವಿದೇಶಗಳಲ್ಲಿ ಗಾಂಧೀಜಿ ಅಂಚೆ ಚೀಟಿಗಳ ಸಂಗ್ರಹ ಇವರಲ್ಲಿದೆ.  ಗಾಂಧೀಜಿ ಪ್ರತಿಪಾದಿಸಿರುವ ಜೀವನ ಮೌಲ್ಯಗಳು ಜಾಗತಿಕ ಸತ್ಯ ಎಂಬುದಕ್ಕೆ ಅವರು ವಿದೇಶಿ ಅಂಚೆ ಚೀಟಿ, ಲಕೋಟೆಗಳಲ್ಲೂ ರಾರಾಜಿಸುತ್ತಿರುವುದೇ ಕನ್ನಡಿ.

Philatelist Akhtar Ali Mudgal of Kalaburagi has  various stamps of Gandhi
Author
Bengaluru, First Published Oct 2, 2019, 12:59 PM IST

ಅಹಿಂಸೆ, ಸತ್ಯ, ಶಾಂತಿ, ಸಾಮರಸ್ಯದ ಸಂದೇಶಗಳೊಂದಿಗೆ ಇಡೀ ರಾಷ್ಟ್ರವನ್ನೇ ಸೂಜಿಗಲ್ಲಿನಂತೆ ಸೆಳೆದಿರುವ ‘ಮಹಾತ್ಮಾ’ ಗಾಂಧೀಜಿ ಕೇವಲ ಭಾರತೀಯರಿಗಷ್ಟೇ ಆರಾಧ್ಯರಲ್ಲ, ಇವರು ಪ್ರತಿಪಾದಿಸಿರುವ ಜೀವನ ಮೌಲ್ಯಗಳು, ದೇಶಪ್ರೇಮ ಚಿಂತನೆಗಳು ಜಾಗತಿಕವಾಗಿ ಗಮನ ಸೆಳೆದಂತಹವು ಎನ್ನಲು ಗಾಂಧೀಜಿ ಪ್ರಪಂಚದ ಹತ್ತಾರು ದೇಶಗಳ ಅಂಚೆ ಚೀಟಿಗಳ ಮೇಲೆ ರಾರಾಜಿಸುತ್ತಿರುವುದೇ ಸಾಕ್ಷಿ.

ಪ್ಯಾಲೇಸ್ಟೀನ್, ರವಾಂಡಾ, ಉಗಾಂಡಾ, ಭೂತಾನ್, ರಿಪಬ್ಲಿಕ್ ಆಫ್ ಗ್ಯಾಮಾನಾಯ್ಜ್, ರಿಪಬ್ಲಿಕ್ ಆಫ್ ಇಸ್ಲಾಮಿಕ್, ಮಾರಿಶಸ್, ಮಾಲ್ಡೀವ್ಸ್ ಸೇರಿದಂತೆ ಪ್ರಪಂಚದ ಹಲವು ದೇಶದವರು ಗಾಂಧೀಜಿ ಗೌರವಾರ್ಥ ಅಂಚೆ ತೀಟಿಗಳನ್ನು ಹೊರ ತಂದಿದ್ದಾರೆ. ಬಾಪೂಜಿ ಭಾವಚಿತ್ರವಿರುವ ಜಗತ್ತಿನ ನಾನಾ ದೇಶಗಳ ಅಂಚೆ ಚಿಟ್ಟಿಗಳನ್ನೆಲ್ಲ ಕಲಬುರಗಿಯಲ್ಲಿರುವ ಅಖ್ತರ್ ಅಲಿ ಮುದ್ಗಲ್ ಕಳೆದ 3 ದಶಕದಿಂದ ಸಂಗ್ರಹಿಸಿದ್ದಾರೆ.

ತಮ್ಮ ಹೆಸರನ್ನೇ ‘ನೇತಾಜಿ ಗಾಂಧಿ’ ಎಂದೇ ಬದಲಾಯಿಸಿಕೊಂಡ ತರುಣ ಗಾಂಧಿ!

ಅಂಚೆ ಇಲಾಖೆ ನಿವೃತ್ತ ಉದ್ಯೋಗಿ ಅಖ್ತರ್ ಅಲಿ ಅಂಚೆ ಚೀಟಿ ಸಂಗ್ರಹ ಹವ್ಯಾಸ ಹೊಂದಿದ್ದು ಅದರಲ್ಲೂ ಗಾಂಧೀಜಿಯವರ ಕುರಿತಂತೆ ತುಂಬಾ ಪ್ರಭಾವ ಹೊಂದಿ ಅವರ ಬದುಕಿನ ಹಲವು ಮಜಲು ಸಾರುವ ಅಂಚೆ ಚೀಟಿಗಳನ್ನೇ ಸಂಗ್ರಹಿಸುತ್ತಿದ್ದಾರೆ.

ಆಕರ್ಷಕ ಅಂಚೆಚೀಟಿಗಳು!

ರಾಷ್ಟ್ರಪಿತನ ಭಾವಚಿತ್ರವಿರುವ ಅವರ ಜನ್ಮಶತಮಾನೋತ್ಸವ ಸಂಭ್ರಮ, ಚಂಪಾರಣ್ ಸತ್ಯಾಗ್ರಹ, ದಂಡಿ ಮಾರ್ಚ್, 1048 ರಲ್ಲೇ ಗಾಂಧೀಜಿ ಗೌರವಾರ್ಥ ಹೊರತಂದಂತಹ ಅಪರೂಪದ ಅಂಚೆಚೀಟಿ ಸೇರಿದಂತೆ 200 ಕ್ಕೂ ಹೆಚ್ಚು ಅಂಚೆ ಚೀಟಿಗಳು ಬಾಪೂಜಿ ಬದುಕನ್ನೇ ಅನಾವರಣಗೊಳಿಸುತ್ತ ಅಖ್ತರ್ ಅಲಿ ಸಂಗ್ರಹದಲ್ಲಿವೆ.

ಇಂದಷ್ಟೇ ಅಲ್ಲ, ಅನುದಿನವೂ ಇವರ ನೆನೆಯೋಣ!

ಅಂಚೆಚೀಟಿಯಲ್ಲೇ ಬಾಪೂಜಿ ಬದುಕು ತೆರೆದಿಡುವ ಕನಸು

ಅಖ್ತರ್ ಅಲಿ ಅವರು ಬಾಪೂಜಿಯವರ ಬದುಕನ್ನೇ ಅಂಚೆ ಚೀಟಿಗಳ ಮೂಲಕ ತೆರೆದಿಡುವ ಕನಸು ಹೊತ್ತಿದ್ದಾರೆ. ಬಾಲಗಾಂಧೀಜಿಯಿಂದ ಹಿಡಿದು ಅವರ ಕೊನೆಗಾಲದವರೆಗೂ ಹೊರಬಂದಿರುವ ಅಂಚೆ ಚೀಟಿಗಳನ್ನು ಸಂಗ್ರಹಿಸಿ, ವಿವರಣೆ ಸಹಿತ ಅವುಗಳನ್ನು ಒಪ್ಪಓರಣವಾಗಿ ಜೋಡಿಸಿ ಗಾಂಧಿಯವರು ಸಾರಿರುವ ಮೌಲ್ಯ, ಪ್ರತಿಪಾದಿಸಿರುವ ಜೀವನ ಸತ್ಯಗಳನ್ನೆಲ್ಲ ಇಂದಿನ ಪೀಳಿಗೆಗೆ ಸಾರಿ ಹೇಳುವ ಯತ್ನ ಮಾಡುತ್ತಿದ್ದಾರೆ. ಈ ಕೆಲಸಕ್ಕೆ ಬೇಕಾಗುವಂತಹ ಅಗತ್ಯ ಸಿದ್ಧತೆಗಳನ್ನು ನಡೆಸಿದ್ದಾರೆ.

 

Follow Us:
Download App:
  • android
  • ios