ಮಣಿಪುರ ಮೂಲದ ಜೆಆರ್ ಫಿಲಿಮೋನ್ ಮೃತದೇಹವು ಜೆಎನ್'ಯು ವಿವಿಯ ವಸತಿನಿಲಯದ ಕೊಠಡಿಯಲ್ಲಿ ಪತ್ತೆಯಾಗಿದೆ.
ನವದೆಹಲಿ(ಅ.26): ದೆಹಲಿಯ ಪ್ರತಿಷ್ಟಿತ ಜವಹರ್'ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹಾಸ್ಟೆಲ್'ನಲ್ಲಿ ಸಂಶೋಧನ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ.
ಮಣಿಪುರ ಮೂಲದ ಜೆಆರ್ ಫಿಲಿಮೋನ್ ಮೃತದೇಹವು ಜೆಎನ್'ಯು ವಿವಿಯ ವಸತಿನಿಲಯದ ಕೊಠಡಿಯಲ್ಲಿ ಪತ್ತೆಯಾಗಿದೆ.
ಫಿಲಿಮೋನ್ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ, ಸಾವಿನ ಕುರಿತಂತೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆಎನ್'ಯು ವಿವಿಯ ಮತ್ತೋರ್ವ ವಿದ್ಯಾರ್ಥಿ ನಜೀಬ್ ಅಹ್ಮದ್ ಕಳೆದ ಅಕ್ಟೋಬರ್ 15 ರಂದು ನಾಪತ್ತೆಯಾಗಿದ್ದು. ಇಲ್ಲಿಯವರೆಗೂ ಪತ್ತೆಯಾಗಿಲ್ಲ. ನಜೀಬ್ ಹುಡುಕಿಕೊಡಿ ಎಂದು ವಿದ್ಯಾರ್ಥಿಗಳು ಜೆಎನ್'ಯು ಆವರಣದಲ್ಲಿ ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದರು.
