ಇನ್ಮುಂದೆ ಉದ್ಯೋಗ ಬದಲಾಯಿಸುವ ಸಂದರ್ಭದಲ್ಲಿ ಉದ್ಯೋಗಿಗಳು ಪ್ರಾವಿಡೆಂಟ್ ಫಂಡ್ ಖಾತೆಯನ್ನು ವರ್ಗಾಯಿಸುವ ಬಗ್ಗೆ ತೆಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಉದ್ಯೋಗ ಬದಲಾಯಿಸುವಾಗ ನಿಮ್ಮ ಪ್ರಾವಿಡೆಂಟ್ ಖಾತೆ ತನ್ನಿಂತಾನೆ ವರ್ಗಾವಣೆಯಾಗುವ ವ್ಯವಸ್ಥೆ ಮುಂದಿನ ತಿಂಗಳಿನಿಂದ ಜಾರಿಯಾಗಲಿರುವುದು ಎಂದು ಪ್ರಾವಿಡೆಂಟ್ ಫಂಡ್ ಆಯುಕ್ತ ವಿ.ಪಿ. ಜಾಯ್ ಹೇಳಿದ್ದಾರೆ.
ನವದೆಹಲಿ: ಇನ್ಮುಂದೆ ಉದ್ಯೋಗ ಬದಲಾಯಿಸುವ ಸಂದರ್ಭದಲ್ಲಿ ಉದ್ಯೋಗಿಗಳು ಪ್ರಾವಿಡೆಂಟ್ ಫಂಡ್ ಖಾತೆಯನ್ನು ವರ್ಗಾಯಿಸುವ ಬಗ್ಗೆ ತೆಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ.
ಉದ್ಯೋಗ ಬದಲಾಯಿಸುವಾಗ ನಿಮ್ಮ ಪ್ರಾವಿಡೆಂಟ್ ಖಾತೆ ತನ್ನಿಂತಾನೆ ವರ್ಗಾವಣೆಯಾಗುವ ವ್ಯವಸ್ಥೆ ಮುಂದಿನ ತಿಂಗಳಿನಿಂದ ಜಾರಿಯಾಗಲಿರುವುದು ಎಂದು ಪ್ರಾವಿಡೆಂಟ್ ಫಂಡ್ ಆಯುಕ್ತ ವಿ.ಪಿ. ಜಾಯ್ ಹೇಳಿದ್ದಾರೆ.
ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಸಂಸ್ಥೆಯನ್ನು (EPFO) ಉದ್ಯೋಗಿ-ಸ್ನೇಹಿಯನ್ನಾಗಿ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಉದ್ಯೋಗಿ ಕೆಲಸ ಬದಲಾಯಿಸುತ್ತಿದ್ದಂತೆ ಹಲವಾರು ಖಾತೆಗಳು ಮುಚ್ಚಲ್ಪಡುತ್ತವೆ. ಆಮೇಲೆ ಹೊಸ ಖಾತೆಗಳನ್ನು ತೆರೆಯಲಾಗುತ್ತದೆ, ಅವಧಿಗೆ ಮುನ್ನ ಪಿಎಫ್ ಖಾತೆಗಳ ಮುಚ್ಚುಗಡೆ ಪ್ರಮುಖ ಸಮಸ್ಯೆಯಾಗಿದ್ದು ಸಂಸ್ಥೆಯ ಸೇವೆಯನ್ನು ಉತ್ತಮಪಡಿಸುವ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಾಯ್ ತಿಳಿಸಿದ್ದಾರೆ.
ಈಗ ನಾವು ಖಾತೆ ತೆರೆಯಲು ಆಧಾರ್ ಕಡ್ಡಾಯಗೊಳಿಸಿದ್ದೇವೆ. ಆದುದರಿಂದ ಖಾತೆಗಳನ್ನು ಮುಚ್ಚುವ ಅಗತ್ಯವಿಲ್ಲ. ಪಿಎಫ್ ಖಾತೆಯು ಶಾಶ್ವತ ಖಾತೆಯಾಗಿರಲಿದೆ, ಎಂದು ಅವರು ಹೇಳಿದ್ದಾರೆ.
ಒಬ್ಬ ವ್ಯಕ್ತಿ ತನ್ನ ಉದ್ಯೋಗವನ್ನು ಬದಲಾಯಿಸದಾಗ, ಯಾವುದೇ ಅರ್ಜಿ ನೀಡದೇ, 3 ದಿನಗಳೋಳಗೆ ಆತನ ಖಾತೆಯಲ್ಲಿರುವ ಹಣವೂ ವರ್ಗಾವಣೆಯಾಗುವಂತೆ ನಾವು ಪ್ರಯತ್ನಿಸುತ್ತಿದ್ದೇವೆ. ಉದ್ಯೋಗಿ ಆಧಾರ್ ಹಾಗೂ ಅಧಿಕೃತ ಗುರುತಿನ ದಾಖಲೆ ಹೊಂದಿದಲ್ಲಿ, ಆತ/ಕೆ ದೇಶದ ಯಾವುದೇ ಕಡೆ ಹೊಸ ಉದ್ಯೋಗಕ್ಕೆ ಸೇರಿಕೊಂಡರೂ ಅರ್ಜಿಯನ್ನು ಸಲ್ಲಿಸದಯೇ ಖಾತೆಯನ್ನು ವರ್ಗಾಯಿಸಿಕೊಳ್ಳುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
