ದಿನದಿನಕ್ಕೂ ಇಳಿಯುತ್ತಿದೆ ಪೆಟ್ರೋಲ್ ದರ

Petrol prices fall for tenth straight day
Highlights

ಪೆಟ್ರೋಲ್ ಮತ್ತು ಡೀಸೆಲ್ ದರವು ಶುಕ್ರವಾರ ಮತ್ತೆ ಇಳಿಕೆಯಾಗಿದೆ. ಇದರೊಂದಿಗೆ ಸತತ 10 ದಿನಗಳಿಂದ ನಿರಂತರವಾಗಿ ತೈಲ ಬೆಳೆ ಇಳಿಕೆಯಾ ದಂತೆ ಆಗಿದೆ. ಇದರಿಂದ ನಿರಂತರ ಏರಿಕೆ ಶಾಕ್ ಗೆ ಒಳಗಾಗಿದ್ದ ಗ್ರಾಹಕರಿಗೆ ಕೊಂಚ ನಿರಾಳ ದೊರಕಿದೆ. 
 

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರವು ಶುಕ್ರವಾರ ಮತ್ತೆ ಇಳಿಕೆಯಾಗಿದೆ. ಇದರೊಂದಿಗೆ ಸತತ 10 ದಿನಗಳಿಂದ ನಿರಂತರವಾಗಿ ತೈಲ ಬೆಳೆ ಇಳಿಕೆಯಾ ದಂತೆ ಆಗಿದೆ. 

10 ದಿನದಲ್ಲಿ ಪ್ರತೀ ಲೀ. ಪೆಟ್ರೋಲ್ ದರ 95 ಪೈಸೆ ಮತ್ತು ಡೀಸೆಲ್ ಬೆಲೆ 82 ಪೈಸೆ ಕಡಿಮೆ ಆಗಿದೆ. 10 ದಿನದ ಪೈಕಿ ಶುಕ್ರವಾರ ಅತಿ ಹೆಚ್ಚು ಅಂದರೆ ಪೆಟ್ರೋಲ್ ಬೆಲೆ ಲೀ.ಗೆ 22 ಪೈಸೆ ಮತ್ತು ಡೀಸೆಲ್ ಬೆಲೆ ಲೀಗೆ 10 ಪೈಸೆ ಇಳಿಕೆ ಆಗಿದೆ.

ಸದ್ಯ ದರ ಇಳಿಕೆಯಿಂದ  ದೆಹಲಿಯಲ್ಲಿ ಪೆಟ್ರೋಲ್ ದರವು 77.42 ರು.ನಷ್ಟಿದ್ದು, ಡೀಸೆಲ್ ದರವು 68.58 ರುನಷ್ಟಿದೆ. ಮುಂಬೈ, ಚೆನ್ನೈ ಹಾಗೂ ಕೋಲ್ಕತಾಗಳಲ್ಲಿಯೂ ಕೂಡ ಪೆಟ್ರೋಲ್ ಡೀಸೆಲ್ ದದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. 

ಈ ಹಿಂದೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರವು 80 ರು.ಗಿಂತಲೂ ಕೂಡ ಅಧಿಕವಾಗಿದ್ದು, ಇದೀಗ ಕ್ರಮೇಣ ಇಳಿಮುಖವಾಗುತ್ತಿದೆ.

loader