ಪೆಟ್ರೋಲ್ ಮತ್ತು ಡಿಸೇಲ್ ದರಗಳು ಸತತ 13ನೇ ದಿನವೂ ಇಳಿಕೆ ಕಂಡಿದ್ದು ಗ್ರಾಹಕರಿಗೆ ಅಲ್ಪ ತೃಪ್ತಿಯನ್ನು ನೀಡಿದೆ. ಮೇ 29 ರಿಂದ ನಿರಂತರವಾಗಿ ಇಳಿಕೆಯಾಗುತ್ತ ಬಂದಿರುವ ತೈಲ ದರ ಸೋಮವಾರ ಪೆಟ್ರೋಲ್ ಗೆ 20 ಪೈಸೆ ಮತ್ತು ಡಿಸೇಲ್ ಗೆ 15 ಪೈಸೆ ಕಡಿಮೆಯಾಗಿದೆ. ಇನ್ನು ಮುಂದೆಯೂ ತೈಲ ದರ ಕಡಿಮೆಯಾಗುವ ನಿರೀಕ್ಷೆಯಿದೆ.
ದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರಗಳು ಸತತ 13ನೇ ದಿನವೂ ಇಳಿಕೆ ಕಂಡಿದ್ದು ಗ್ರಾಹಕರಿಗೆ ಅಲ್ಪ ತೃಪ್ತಿಯನ್ನು ನೀಡಿದೆ. ಮೇ 29 ರಿಂದ ನಿರಂತರವಾಗಿ ಇಳಿಕೆಯಾಗುತ್ತ ಬಂದಿರುವ ತೈಲ ದರ ಸೋಮವಾರ ಪೆಟ್ರೋಲ್ ಗೆ 20 ಪೈಸೆ ಮತ್ತು ಡಿಸೇಲ್ ಗೆ 15 ಪೈಸೆ ಕಡಿಮೆಯಾಗಿದೆ. ಇನ್ನು ಮುಂದೆಯೂ ತೈಲ ದರ ಕಡಿಮೆಯಾಗುವ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಗ್ರಾಹಕರು ಲೀಟರ್ ಪೆಟ್ರೋಲ್ ಗೆ 77.82 ರೂ. ನೀಡಬೇಕಿದ್ದರೆ ಲೀಟರ್ ಡಿಸೇಲ್ ಗೆ 69.12 ರೂ. ನೀಡಬೇಕಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಏರಿಳಿತದ ಪರಿಣಾಮ ಭಾರತದಲ್ಲಿನ ತೈಲ ಬೆಲೆ ನಿರಂತರ ಏರಿಕೆಯಾಗುತ್ತಿತ್ತು. ಸಾಮಾಜಿಕ ತಾಣಗಳಲ್ಲೂ ಕೇಂದ್ರ ಸರಕಾರದ ವಿರುದ್ಧ ಟೀಕೆ ಕೇಳಿಬಂದಿತ್ತು. ಹಿಂದಿನ ಯುಪಿಎ ಸರಕಾರ ಮತ್ತು ಇಂದಿನ ಎನ್ ಡಿಎ ಸರಕಾರದ ಅವಧಿಯನ್ನು ತುಲನೆ ಮಾಡಿ ಪೋಸ್ಟ್ ಗಳನ್ನು ಹಾಕಲಾಗುತ್ತಿತ್ತು. ಆದರೆ ಇದೀಗ ಕಳೆದ 13 ದಿನಗಳಿಂದ ತೈಲ ದರ ನಿರಂತರವಾಗಿ ಇಳಿಕೆಯಾಗುತ್ತ ಬಂದಿದೆ.
ಚಿದಂಬರಂ ಪ್ರಶ್ನೆ: ನೀವು ಪೆಟ್ರೋಲ್ ಮತ್ತು ಡಿಸೇಲ್ ನ್ನು ಜಿಎಸ್ ಟಿ ವ್ಯಾಪ್ತಿಗೆ ತೆಗೆದುಕೊಂಡು ಬನ್ನಿ. ಬಹುತೇಕ ರಾಜ್ಯಗಳಲ್ಲಿ ನಿಮ್ಮದೆ ಸರಕಾರವಿದೆ. ಆದರೂ ತೈಲ ದರ ಏರಿಕೆಗೆ ರಾಜ್ಯಗಳ ಮೇಲೆ ಯಾಕೆ ಆರೋಪ ಮಾಡುತ್ತೀರಿ ಎಂದು ಕೇಂದ್ರ ಸರಕಾರ ಮತ್ತು ಬಿಜೆಪಿಯನ್ನು ಕೇಂದ್ರದ ಹಣಕಾಸು ಮಾಜಿ ಸಚಿವ ಪಿ. ಚಿದಂಬರಂ ಪ್ರಶ್ನೆ ಮಾಡಿದ್ದಾರೆ.
