ಗುಡ್ ನ್ಯೂಸ್ : ಮತ್ತೆ ಇಳಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ

news | Thursday, June 7th, 2018
Suvarna Web Desk
Highlights

ದಿನದಿನಕ್ಕೂ ಗಗನಕ್ಕೇರಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮೇಣ ಇಳಿಕೆಯಾಗುತ್ತಿದೆ. ಸತತ 9 ನೇ ದಿನವೂ ತೈಲ ದರದಲ್ಲಿ ಇಳಿಕೆ ಕಂಡು ಬಂದಿದೆ.

ನವದೆಹಲಿ(ಜೂ.7): ದಿನದಿನಕ್ಕೂ ಗಗನಕ್ಕೇರಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮೇಣ ಇಳಿಕೆಯಾಗುತ್ತಿದೆ. ಸತತ 9 ನೇ ದಿನವೂ ತೈಲ ದರದಲ್ಲಿ ಇಳಿಕೆ ಕಂಡು ಬಂದಿದೆ.

ಇಂದು ಬೆಳಗ್ಗೆ ಪೆಟ್ರೋಲ್ ದರಲ್ಲಿ 9 ಪೈಸೆ  ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ 8 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ.  ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರದಲ್ಲಿ ಗಣನೀಯ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲಿ ದರ ಕಡಿಮೆ ಮಾಡಲಾಗುತ್ತಿದೆ. 

ದೆಹಲಿ, ಮುಂಬೈಗಳಲ್ಲಿ ಪೆಟ್ರೋಲ್ ದರವು73.17ರಷ್ಟಿದ್ದು,  ಡೀಸೆಲ್ ದರವು  68.73ರು.ನಷ್ಟಾಗಿದೆ.  ಚೆನ್ನೖ ನಲ್ಲಿ ಪೆಟ್ರೋಲ್ ದರ 72.56 ರು ಇದ್ದು, ಕೋಲ್ಕತಾದಲ್ಲಿ 71.28 ರುನಷ್ಟಿದೆ.  

ಈ ಹಿಂದೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರವು 80 ರು.ವರೆಗೂ ಕೂಡ ತಲುಪಿತ್ತು. ಇದೀಗ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. 

Comments 0
Add Comment

  Related Posts

  Centre Mulling To Cut Taxes On Petrol and Diesel

  video | Tuesday, January 30th, 2018

  Thousands of trees cut

  video | Friday, January 19th, 2018

  Darshan New Car Price 8 Crore

  video | Friday, January 12th, 2018

  Players who were sold at more than 10 times their base price

  video | Wednesday, January 31st, 2018
  Sujatha NR