ಅಯ್ಯೋ ದೇವರೇ ಬೆಂಗಳೂರಲ್ಲಿ 80 ರೂ.ಗೆ ಮುತ್ತಿಕ್ಕಿದ ಪೆಟ್ರೋಲ್ ದರ!

Petrol Price kissing to Rs 80 in Bengaluru
Highlights

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಲೇ ಇದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ 80 ರೂ. ಆಸುಪಾಸಿನಲ್ಲಿದ್ದ ತೈಲ ಬೆಲೆ ಇಂದು ಬೆಂಗಳೂರಲ್ಲಿಯೂ 80 ರೂ. ಗಡಿ ದಾಟುವ ಹಂತದಲ್ಲಿದೆ.

ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಲೇ ಇದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ 80 ರೂ. ಆಸುಪಾಸಿನಲ್ಲಿದ್ದ ತೈಲ ಬೆಲೆ ಇಂದು ಬೆಂಗಳೂರಲ್ಲಿಯೂ 80 ರೂ. ಗಡಿ ದಾಟುವ ಹಂತದಲ್ಲಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ತೈಲ ದರೆ ಏರಿಕೆ ಕಾಣಲು ಆರಂಭಿಸಿದ್ದು, ನಿರಂತವಾಗಿ ಏರುತ್ತಲೇ ಇದೆ. ದಿನೇ ದಿನೇ ಏರುತ್ತಿರುವ ಪೆಟ್ರೋಲ್ ದರ ಕಂಡು ವಾಹನ ಸವಾರರು ಕಂಗಾಲಾಗಿದ್ದಾರೆ.

ಬೆಂಗಳೂರಲ್ಲಿ ಮೇ 28ರಂದು ಪ್ರತೀ ಲೀಟರ್ ಪೆಟ್ರೋಲ್ ಗೆ 79 ರೂಪಾಯಿ 55 ಪೈಸೆ ಆದರೆ, ಪ್ರತೀ ಲೀಟರ್ ಡೀಸೆಲ್ ದರ 73 ರೂಪಾಯಿ 42 ಪೈಸೆ ಆಗಿದೆ. ಮೇ 15ರಂದು ಪ್ರತೀ ಲೀಟರ್ ಪೆಟ್ರೋಲ್ ದರ 76 ರೂಪಾಯಿ 16 ಪೈಸೆ ಇದ್ದರೆ, ಮೇ 20ರಂದು ಪ್ರತೀ ಲೀಟರ್ ಪೆಟ್ರೋಲ್ ದರ 77 ರೂಪಾಯಿ 48 ಪೈಸೆ ಇತ್ತು. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರುತ್ತಲೇ ಇದ್ದು, 15 ದಿನಗಳಿಂದ ಏರುತ್ತಿರುವ ತೈಲ ಬೆಲೆ ತಡೆಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ತೈಲ ರಫ್ತು ಮಾಡುವ ದೇಶಗಳಲ್ಲಿ ಕುಸಿದ ತೈಲ ಉತ್ಪಾದನೆ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಾಣುತ್ತಿದೆ.
 

loader