ಬೆಲೆಗಳನ್ನು ಈ ಮೊದಲೇ ಇಳಿಸಬೇಕಾಗಿತ್ತು. ಆದರೆ ಪಂಚ ರಾಜ್ಯಗಳಲ್ಲಿ ಚುನಾವಣೆ ಇದ್ದ ಕಾರಣದಿಂದ ಬೆಲೆ ಇಳಿಕೆ ಮಾಡಿರಲಿಲ್ಲ. ಈಗ ಫಲಿತಾಂಶ ಲಭ್ಯವಾಗಿರುವುದರಿಂದ ಬೆಲೆ ಕಡಿಮೆಯಾಗಲಿದೆ.

ನವದೆಹಲಿ(ಮಾ.14): ವಾಹನ ಸವಾರರಿಗೆ ಈಗ ಬಂಪರ್ ನಾಳೆಯಿಂದ (ಮಾ.15) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಪ್ರತಿ ಬ್ಯಾರಲ್'ಗೆ 56 ಡಾಲರ್'ನಿಂದ 54 ಡಾಲರ್'ಗೆ ಇಳಿಕೆಯಾಗಿರುವುದರಿಂದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ 2 ರಿಂದ 2.50 ರೂ ವರೆಗೂ ಕಡಿಮೆಯಾಗುವ ಸಾಧ್ಯತೆಯಿದೆ.

ಬೆಲೆಗಳನ್ನು ಈ ಮೊದಲೇ ಇಳಿಸಬೇಕಾಗಿತ್ತು. ಆದರೆ ಪಂಚ ರಾಜ್ಯಗಳಲ್ಲಿ ಚುನಾವಣೆ ಇದ್ದ ಕಾರಣದಿಂದ ಬೆಲೆ ಇಳಿಕೆ ಮಾಡಿರಲಿಲ್ಲ. ಈಗ ಫಲಿತಾಂಶ ಪ್ರಕಟವಾಗಿರುವುದರಿಂದ ಬೆಲೆ ಕಡಿಮೆಯಾಗಲಿದೆ.