ಥರ್ಡ್ ಪಾರ್ಟಿ ಪ್ರೀಮಿಯಮ್ ದರ ಏರಿಕೆಯನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಬೆಂಗಳೂರು (ಏ.01): ಥರ್ಡ್ ಪಾರ್ಟಿ ಪ್ರೀಮಿಯಮ್ ದರ ಏರಿಕೆಯನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಬೆಂಗಳೂರಿನ ಟ್ರಕ್ ಟರ್ಮಿನಲ್ ನಲ್ಲಿ ಸಾವಿರಾರು ಲಾರಿಗಳನ್ನ ನಿಲ್ಲಿಸೊ ಮೂಲಕ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ. ಸೋಮವಾರದ ವೇಳೆಗೆ ದವಸ ಧಾನ್ಯ, ತರಕಾರಿ, ಅಕ್ಕಿ ಬೇಳೆ, ವಾಣಿಜ್ಯ ಸರಕು ಸೇರಿದಂತೆ ಹಲವು ಪದಾರ್ಥಗಳಿಗೆ ಅಭಾವ ಸೃಷ್ಟಿಯಾಗಲಿದೆ.
ಸೋಮವಾರದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್, ಗ್ಯಾಸ್ ಸರಬರಾಜು ಸ್ಥಗಿತ ವಾಗಲಿದೆ. ಲಾರಿ ಮಾಲೀಕರ ಮುಷ್ಕರಕ್ಕೆ ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿಮ್ ಕ್ಯಾಬ್, ಗ್ಯಾಸ್, ಪೆಟ್ರೋಲ್ ಟ್ಯಾಂಕರ್ ಗಳ ಮಾಲೀಕರು ಸಾಥ್ ನೀಡಲಿದ್ದಾರೆ. ರಾಜ್ಯಾದ್ಯತ ೯ ಲಕ್ಷಕ್ಕೂ ಹೆಚ್ಚು ಲಾರಿಗಳು ಬಂದ್ ಆಗಲಿದ್ದು ಬೆಂಗಳೂರಿನಲ್ಲಿ 2.5 ಲಕ್ಷಕ್ಕೂ ಹೆಚ್ಚು ವಾಹನಗಳು ಸ್ಥಗಿತಗೊಳ್ಳಲಿವೆ.
