ಸತತ ನಾಲ್ಕನೇ ದಿನವೂ ತೈಲ ಬೆಲೆಯಲ್ಲಿ ಇಳಿಕೆ..!

First Published 2, Jun 2018, 5:08 PM IST
Petrol, diesel prices cut by 9 paise each
Highlights

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲ್ಲೇ, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ದರ 9 ಪೈಸೆಯಷ್ಟು ಕಡಿಮೆಯಾಗಿದೆ. ಸತತ ನಾಲ್ಕು ದಿನಗಳಿಂದ ತೈಲ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದ್ದು, ಜನಸಮಾನ್ಯರಲ್ಲಿ ಸಂತಸ ಮೂಡಿಸಿದೆ.
 

ನವದೆಹಲಿ(ಜೂ.2): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲ್ಲೇ, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ದರ 9 ಪೈಸೆಯಷ್ಟು ಕಡಿಮೆಯಾಗಿದೆ. ಸತತ ನಾಲ್ಕು ದಿನಗಳಿಂದ ತೈಲ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದ್ದು, ಜನಸಮಾನ್ಯರಲ್ಲಿ ಸಂತಸ ಮೂಡಿಸಿದೆ.

ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್ ದರ ರೂ. 78.29 ಇದ್ದು ಇದೀಗ 9 ಪೈಸೆಯಷ್ಟು ಕಡಿಮೆಯಾದ ಪರಿಣಾಮ ಪೆಟ್ರೋಲ್ ದರ ರೂ. 78.20 ಆಗಿದೆ. ಇನ್ನು ಡೀಸೆಲ್ ದರ 69.20 ಇದ್ದು ಇದೀಗ ದರ ಇಳಿಕೆ ಬಳಿಕ ರೂ. 68.11 ಆಗಿದೆ.

ಇನ್ನು ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ ರೂ. 80.84, ಮುಂಬೈನಲ್ಲಿ ರೂ. 86.01, ಹಾಗೂ ಚೆನ್ನೈನಲ್ಲಿ ರೂ. 81.19 ಇದೆ. ಕೊಲ್ಕತ್ತಾದಲ್ಲಿ ಡೀಸೆಲ್ ದರ ರೂ. 71.66, ಮುಂಬೈನಲ್ಲಿ ರೂ. 73.58, ಹಾಗೂ ಚೆನ್ನೈನಲ್ಲಿ ರೂ. 72.97 ಇದೆ.

ಕಳೆದ ಮೇ 30 ರಿಂದ ಸತತವಾಗಿ ತೈಲ ಬೆಲೆ ಇಳಿಕೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದುವರೆಗೂ ಒಟ್ಟು 23 ಪೈಸೆ ಬೆಲೆ ಕಡಿಮೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಕಡಿತವಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿದೆ.

loader