ಕೆಲ ದಿನಗಳಿಂದ ಸತತವಾಗಿ ಏರಿಕೆಯಾಗಿ ಜನರಿಗೆ ತಲೆನೋವಾಗಿದ್ದ ತೈಲ ದರ ಇದೀಗ ನಿರಂತರವಾಗಿ ಇಳಿಕೆಯಾಗುತ್ತಿದೆ. ಕಳೆದ 11 ದಿನಗಳಿಂದ ನಿರಂತರವಾಗಿ ಇಳಿಯುತ್ತಿದೆ.

ನವದೆಹಲಿ: ನಿರಂತರವಾಗಿ ಇಳಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರ ಇದೀಗ 11ನೇ ದಿನವೂ ಕೂಡ ಇಳಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಕಂಡು ಬಂದಿದೆ. ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 40 ಪೈಸೆ ಇಳಿಕೆಯಾಗಿದೆ. ಡೀಸೆಲ್ ದರಲ್ಲಿ 33 ಪೈಸೆ ಇಳಿಕೆಯಾಗಿದೆ. ಇದರಿಂದ ಪೆಟ್ರೋಲ್ ಬೆಲೆ 80.05 ರು.ಗಳಾಗಿದ್ದು, ಡೀಸೆಲ್ ಬೆಲೆ 74.05 ರು.ನಷ್ಟಾಗಿದೆ. 

ಇನ್ನು ಮುಂಬೈನಲ್ಲಿಯೂ ಕೂಡ ತೈಲ ದರದಲ್ಲಿ ಇಳಿಕೆಯಾಗಿದ್ದು ಪೆಟ್ರೋಲ್ ಬೆಲೆ 85.54 ಡೀಸೆಲ್ ಬೆಲೆ 77.61 ರು.ಗಳಾಗಿದೆ. 

ನಿರಂತರವಾಗಿ ಏರಿಕೆಯಾಗಿ ಜನರ ಜೇಬಿಗೆ ಕತ್ತರಿ ಹಾಕಿದ್ದ ತೈಲ ದರ ಇದೀಗ ಕಳೆದ 11 ದಿನಗಳಿಂದ ನಿರಂತರವಾಗಿ ಇಳಿಕೆಯಾಗಿದ್ದು, ಇದು ಗ್ರಾಹಕರಿಗೆ ಕೊಂಚ ನಿರಾಳತೆಯನ್ನು ಒದಗಿಸಿದೆ.