ಇಷ್ಟು ದಿನಗಳ ಕಾಲ ಗಗನಮುಖಿಯಾಗಿದ್ದ ಪೆಟ್ರೋಲ್, ಡೀಸೆಲ್ ದರ ಇಳಿಯುತ್ತಿದೆ. ಕಳೆದ ಮೂರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಮುಖವಾಗಿದೆ.

ಬೆಂಗಳೂರು: ಕಳೆದ ಮೂರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಮುಖವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ಮೂರು ದಿನಗಳಿಂದ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕ್ರಮವಾಗಿ 85 ಪೈಸೆ ಮತ್ತು 33 ಪೈಸೆ ಇಳಿಕೆಯಾಗಿದೆ. ಕಳೆದ 6 ತಿಂಗಳಿಂದ ತೈಲ ದರ ಏರುಮುಖವಾಗಿದ್ದರಿಂದ ಗ್ರಾಹಕರು ತತ್ತರಿಸಿ ದ್ದರು. 

Add Asianetnews Kannada as a Preferred SourcegooglePreferred

ಲೀಟರ್ ಪೆಟ್ರೋಲ್ 85 ಹಾಗೂ ಡೀಸೆಲ್ 80 ಗಡಿಯತ್ತ ಸಾಗಿತ್ತು. ಸೆಪ್ಟೆಂಬರ್ ಅಂತ್ಯ ಹಾಗೂ ಅಕ್ಟೋಬರ್ ಆರಂಭದಲ್ಲಿ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೈಲದ ಮೇಲಿನ ಸೆಸ್ ಕೊಂಚ ತಗ್ಗಿಸಿದ್ದರಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ 4.50 ಪೈಸೆ ಇಳಿಕೆಯಾಗಿತ್ತು. ನಂತರದ ದಿನಗಳಲ್ಲೂ ನಿತ್ಯ ಪೈಸೆಗಳ ಲೆಕ್ಕದಲ್ಲಿ ತೈಲ ದರ ಏರಿಕೆಯಾಗಿ ಮತ್ತೆ ಹಿಂದಿನ ಸ್ಥಿತಿಗೆ ತಲುಪಿತ್ತು.

ಇದೀಗ ಕಳೆದ ಮೂರು ದಿನಗಳಿಂದ ದರ ಇಳಿಮುಖವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಅ.17ರಂದು ಲೀಟರ್ ಪೆಟ್ರೋಲ್ 83.49 ರು. ಮತ್ತು ಡೀಸೆಲ್ 76.08 ರು. ಮುಟ್ಟಿತ್ತು. ಶನಿವಾರ ಲೀಟರ್ ಪೆಟ್ರೋಲ್ 82.64 ರು. ಮತ್ತು 75.75 ರು. ತಲುಪಿತ್ತು.