ಮತ್ತೊಮ್ಮೆ ಇದೀಗ ಪೆಟ್ರೋಲ್ ಡೀಸೆಲ್ ದರದಲ್ಲಿ  ಮತ್ತೊಮ್ಮೆ ಇಳಿಕೆ ಕಂಡು ಬಂದಿದೆ. ಇದರಿಂದ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿದೆ. 

ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ನಿರಂತರವಾಗಿ ಇಳಿಕೆಯಾಗುತ್ತಿದ್ದು ಇದರಿಂದ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿದೆ. 

ಗುರುವಾರವೂ ಮತ್ತೆ ತೆಳ ದರ ಇಳಿದಿದ್ದು ಪ್ರತೀ ಲೀಟರ್ ಪೆಟ್ರೋಲ್ ಬೆಲೆ 15 ಪೈಸೆಯಷ್ಟು ಇಳಿದಿದೆ. ಡೀಸೆಲ್ ಬೆಲೆ 10 ಪೈಸೆಯಷ್ಟು ಇಳಿದಿದೆ. 

ಇದರಿಂದ ಪೆಟ್ರೋಲ್ ದರ 77.28 ರು.ಗಳಾಗಿದ್ದು, ಡೀಸೆಲ್ ದರ 72.09ರು.ಗಳಾಗಿದೆ. 

ಕೆಲ ದಿನಗಳಿಂದ ನಿರಂತರವಾಗಿ ಪೆಟ್ರೋಲ್ , ಡೀಸೆಲ್ ದರದಲ್ಲಿ ಇಳಿಮುಖವಾಗುತ್ತಿದ್ದು, ವಾಹನ ಸವಾರರಲ್ಲಿ ಸಂತಸವನ್ನುಂಟು ಮಾಡಿದೆ. 

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್ಗೆ 77.90 ಹಾಗೂ ಡೀಸೆಲ್ ಬೆಲೆ 72.48 ರುಗಳಿಗೆ ಮಾರಾಟವಾಗುತ್ತಿದೆ.